ಕಲಬುರ್ಗಿ : ಹಣ ನೀಡುವಂತೆ ಶಾಸಕ ಅಜಯ್ ಸಿಂಗ್ ಗೆ ವ್ಯಕ್ತಿಯಿಂದ ಕಿರುಕುಳ..

ಕಲಬುರ್ಗಿ – ಹಣಕ್ಕಾಗಿ ವ್ಯಕ್ತಿಯೋರ್ವನಿಂದ ಶಾಸಕರಿಗೆ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಜೇವರ್ಗಿ ಕ್ಷೇತ್ರದ ಶಾಸಕ ಡಾ.ಅಜಯ್ ಸಿಂಗ್ ರನ್ನು ವ್ಯಕ್ತಿ ಪೀಡಿಸುತ್ತಿದ್ದಾನೆ. ಜೇವರ್ಗಿ‌ ತಾಲೂಕಿನ ಲಕನಾಪೂರ್ ಗ್ರಾಮದ ನಿವಾಸಿ ಶರಣಪ್ಪಗೌಡ ಅನ್ನೋ ವ್ಯಕ್ತಿ ಏಳು‌ ಲಕ್ಷ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ.

ಚುನಾವಣೆ ಮುನ್ನ ಹಣ ಕೊಡೋದಾಗಿ ಡಾ.ಅಜಯ್ ಸಿಂಗ್ ಶರಣಪ್ಪಗೌಡಗೆ ಹೇಳಿದ್ದರಂತೆ, ತಮ್ಮ ಪರವಾಗಿ ಕೆಲಸ ಮಾಡು, ಹಣ ನೀಡುತ್ತೇನೆ ಅಂತ ಹೇಳಿದ್ದರಂತೆ, ಆದ್ರೆ ಚುನಾವಣೆ ಮುಗಿದ ಮೇಲೆ ತನಗೆ ಹಣ ನೀಡುತ್ತಿಲ್ಲಾ ಅಂತ ಶರಣಪ್ಪಗೌಡ ಆರೋಪಿಸುತ್ತಿದ್ದಾನೆ.

ಆದ್ರೆ ತಾನು ಹಣ ನಿಡೋದಾಗಿ ಹೇಳಿಲ್ಲಾ, ಆತನ ತನಗೆ ತೊಂದರೆ ಕೊಡ್ತಾಯಿದ್ದಾನೆ ಎಂದು ಡಾ.ಅಜಯ್ ಸಿಂಗ್ ಹೇಳುತ್ತಿದ್ದಾರೆ. ವಾಟ್ಸಪ್ ಮತ್ತು ಪೋನ್ ಮಾಡಿ ಹಣಕ್ಕಾಗಿ ಶರಣಪ್ಪಗೌಡ ಡಿಮ್ಯಾಂಡ್ ಮಾಡುತ್ತಿದ್ದಾನೆ. ಹೀಗೆ ಮುಂದುವರಿದರೆ ಕಂಪ್ಲೇಟ್ ಕೊಡೋದಾಗಿ ಡಾ.ಅಜಯ್‌ಸಿಂಗ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com