ತುಮಕೂರು : ಜಾತಿ ನೆಪವೊಡ್ಡಿ ಪ್ರೀತಿಗೆ ಪೋಷಕರ ವಿರೋಧ : ಆತ್ಮಹತ್ಯೆಗೆ ಶರಣಾದ ಯುವಕ

ತುಮಕೂರು‌ : ಪ್ರೀತಿಗಾಗಿ ಭಗ್ನ ಪ್ರೇಮಿಯೊಬ್ಬ ಪ್ರಾಣ ಬಿಟ್ಟಿರುವ ಘಟನೆ ತುಮಕೂರಿನ ಕ್ಯಾತ್ಸಂದ್ರ ಬಳಿಯ ಬಸವಾ ಪಟ್ಟಣದಲ್ಲಿ ನಡೆದಿದೆ. ಪ್ರೀತಿಗೆ ಜಾತಿ‌ ಅಡ್ಡ ಬಂದಿದ್ದಕ್ಕೆ ರಾಘವೇಂದ್ರ (22) ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಫೇಸ್ಬುಕ್ ಲೈವ್ ನಲ್ಲಿ ಮನದಾಳ ಹಂಚಿಕೊಂಡಿದ್ದ. ಸಾಯುವ ಕೊನೆ ಕ್ಷಣದಲ್ಲಿ ಯುವತಿ ಜೊತೆ ವಾಟ್ಸಪ್ ಚಾಟ್ ಮಾಡಿದ್ದ‌. ಯುವತಿಯನ್ನ ಪ್ರೀತಿಸಿ ಮದುವೆಯಾಗುವ ಕನಸು ಕಂಡಿದ್ದ‌. ಜಾತಿ ನೆಪವೊಡ್ಡಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯುವಕನ ತಾಯಿ ದೂರು ದಾಖಲಿಸಿದ್ದಾರೆ. ಕ್ಯಾತ್ಸಂದ್ರ ಪೋಲಿಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com