WATCH : ದೇಶ ಕಾಯುವ ಯೋಧನ ತಂದೆಗಿಲ್ಲ ರಕ್ಷಣೆ : ವಿಡಿಯೋದಲ್ಲಿ ಅಳಲು ತೋಡಿಕೊಂಡ ಸೈನಿಕ..

ದೇಶ ಕಾಯುತ್ತಿರುವ ಸಿಐಎಸ್ಎಫ್ ಯೋಧನೇ ತನ್ನ ತಂದೆಗೆ ರಕ್ಷಣೆ ನೀಡುವಂತೆ ಅಳಲು ತೋಡಿಕೊಂಡಿದ್ದಾನೆ. ಯೋಧನ ತಂದೆಗೆ ಅಪಘಾತವಾಗಿದ್ದ ವೇಳೆ, ಸ್ಥಳೀಯರಿಂದ ತೀವ್ರ ಹಲ್ಲೆ ನಡೆಸಲಾಗಿತ್ತು. ಹಲ್ಲೆಯಿಂದಾಗಿ ಯೋಧ ಮಂಜುನಾಥ್ ತಂದೆ ಚಿಂತಾಜನಕ ಸ್ಥಿತಿ ತಲುಪಿದ್ದಾರೆ. ಯೋಧ ಮಂಜುನಾಥ್ ದೂರದ ಜಾರ್ಖಂಡ್ ನಲ್ಲಿ ಭದ್ರತಾ ಕರ್ತವ್ಯದ ಮೇಲಿದ್ದಾರೆ.

ತನ್ನ ತಂದೆಗೆ ಅನ್ಯಾಯವಾಗಿದ್ದರೂ ಪಿರಿಯಾಪಟ್ಟಣ ಪೊಲೀಸರು ಸ್ಪಂದಿಸುತ್ತಿಲ್ಲಾ ಎಂದು ಆರೋಪಿಸಿದ್ದಾರೆ. ಅಪಘಾತದ ಬಳಿಕ ಪ್ರಕರಣ ದಾಖಲಿಸದೆ ಪೊಲೀಸರಿಂದ ನಿರ್ಲಕ್ಷ್ಯತೋರಿದ್ದಾರೆ. ತಂದೆಯ ಸಹಾಯಕ್ಕೆ ಬರಲಾಗದ ತಮ್ಮ ಮನದಾಳದ ನೋವನ್ನು ಯೋಧ ವಾಟ್ಸಪ್ ಹಾಗೂ ಫೇಸ್ ಬುಕ್ ಮೂಲಕ ಅಳಲು ತೋಡಿಕೊಂಡಿದ್ದಾರೆ.

ಯೋಧನ ಕುಟುಂಬಕ್ಕೇ ಸಹಾಯ ಹಸ್ತ ಚಾಚದ ಪೊಲೀಸರ ವರ್ತನೆಗೆ ಆಕ್ರೋಶ ಹೊರಹಾಕಿದ್ದಾರೆ. ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಕಾಲೋನಿ, ರಾಜೀವ್ ಗ್ರಾಮದವರಾಗಿರುವ ಯೋಧ ಮಂಜುನಾಥ್ ತಂದೆ ಸದ್ಯಕ್ಕೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಒಟ್ಟಿನಲ್ಲಿ ದೇಶ ಕಾಯುವ ಸೈನಿಕನ‌ ಕುಟುಂಬಕ್ಕೇ ರಕ್ಷಣೆ ಇಲ್ಲದಂತಾಗಿದೆ. ಕಳೆದ ಜೂನ್ 5ರಂದು ಅಪಘಾತವಾಗಿದೆ. ಅಪಘಾತವೆಸಗಿದವರೇ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೂ ಪ್ರಭಾವ ಬಳಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲಾಗಿದೆ ಎಂಬುದು ಯೋಧ ಮಂಜನಾಥ್  ಆರೋಪವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com