ಕಲ್ಬುರ್ಗಿ : ಆಟೋ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಸಾವು : 7 ಶಾಲಾ ಮಕ್ಕಳಿಗೆ ಗಾಯ

ಕಲಬುರ್ಗಿ : ಆಟೋ ಪಲ್ಟಿಯ‍ಾಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಕಾಳಗಿ ತಾಲ್ಲೂಕು ಬೆಡಸೂರ (ಎಂ) ತಾಂಡಾ ಬಳಿ ನಡೆದಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೊ ಪಲ್ಟಿಯಾದ ಪರಿಣಾಮ 7ನೇ ತರಗತಿ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ.

ಬೆಡಸೂರ(ಎಂ) ತಾಂಡಾದ ಅರುಣ ಚವಾಣ(13) ಮೃತ ದುರ್ದೈವಿಯಾಗಿದ್ದಾನೆ. 7 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕಾಳಗಿ ತಾಲ್ಲೂಕು ಅರಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಆಟೊ ಚಾಲಕ ಪರಾರಿಯಾಗಿದ್ದಾನೆ. ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com