ಶಾಸಕ ಆನಂದ್ ಸಿಂಗ್ ವಿರುದ್ಧ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ : ವ್ಯಕ್ತಿಯ ಬಂಧನ..

ಸಾಮಾಜಿಕ ಜಾಲತಾಣದಲ್ಲಿ ಹೊಸಪೇಟೆಯ ವಿಜಯನಗರ ಶಾಸಕ ಆನಂದ್ ಸಿಂಗ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಎಂಬ ಆರೋಪದ ಮೇಲೆ ಓರ್ವನನ್ನು ಹೊಸಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ಆನಂದ್ ಸಿಂಗ್ ಸಹೋದರ ಸಂಬಂಧಿ ಸಂದೀಪ್ ಸಿಂಗ್ ನೀಡಿದ್ದ ದೂರು ಆಧರಿಸಿ ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಹೊಸಪೇಟೆ ನಗರದ ಶ್ರೀನಿವಾಸ್ ಕಳೆದ ಕೆಲವು ದಿನಗಳಿಂದ ಆನಂದ್ ಸಿಂಗ್ ವಿರುದ್ಧ ಎಫ್‍ಬಿಯಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ ಶೇರ್ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿ ಸಂದೀಪ್​ ಸಿಂಗ್​ ದೂರು ದಾಖಲಿಸಿದ್ದರು.

ಬಂಧಿತ ಶ್ರೀನಿವಾಸ್ ತನ್ನ ಫೇಸ್​ಬುಕ್ ಖಾತೆಯಲ್ಲಿ “ಆನಂದ್ ಸಿಂಗ್ ಕೇವಲ ಒಂದು ಸಮುದಾಯದ ಪರ ಕೆಲಸ ಮಾಡುತ್ತಾರೆ. ಕೆಲವು ಕೀಳು ಪದ ಬಳಸಿದ್ದ ಎನ್ನಲಾಗಿದೆ. ಇನ್ನು ಈತನ ಪೋಸ್ಟ್​ಗೆ ಪರ ಮತ್ತು ವಿರೋಧ ಕಾಮೆಂಟ್​ ಮಾಡಿದ್ದ ಕೆಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published.