ಸೀರೆಯ ಮೇಲೆ ಲಲಿತಾ ಸಹಸ್ರನಾಮ ಹೆಣೆದ ಮಹಿಳೆ : ಶೃಂಗೇರಿ ಶಾರದಾಂಬೆಗೆ ಅರ್ಪಣೆ

ತನ್ನ ನೋವನ್ನ ಮರೆಯೋಕೆ ಮಹಿಳೆಯೊಬ್ಬರು ಸೀರೆಯ ಮೇಲೆ ಲಲಿತ ಸಹಸ್ರ ನಾಮವನ್ನು ಬರೆದು ಶೃಂಗೇರಿ ಶಾರದಾಂಭೆಗೆ ಅರ್ಪಣೆ ಮಾಡಿರುವ ವಿಡಿಯೋ ಹಾಗೂ ಪೋಟೋ ವೈರಲ್ ಆಗಿದೆ. ಕಳೆದ ವರ್ಷ ತಮಿಳುನಾಡು ಮೂಲದ ಪದ್ಮ ಮಂಜುನಾಥ್‌ ಎಂಬುವರ ಮಗ ಮೃತಪಟ್ಟಿದ್ದರು. ಆ ನೋವನ್ನ ಮರೆಯೋಕೆ ಪದ್ಮ ಮಂಜುನಾಥ ಸೀರೆಯ ಮೇಲೆ ಸಾವಿರ ನಾಮವನ್ನು ಹೆಣೆದಿದ್ದಾರೆ.

ಇದೊಂದು ದಾಖಲಾರ್ಹ ಕುಸುರಿ ಕೆಲಸವೆಂದರು ತಪ್ಪಲ್ಲ.‌ ಒಂಭತ್ತು ಗಜ (೧೫ ಅಡಿ ಉದ್ದ) ಉದ್ದದ ಕಂಚಿ ರೇಷ್ಮೆ ಸೀರೆಯ ಮೇಲೆ ಹಳದಿ ದಾರದಲ್ಲಿ ಸಣ್ಣ ಸೂಜಿಯಿಂದ ಲಲಿತ ಸಹಸ್ರ ನಾಮ ಸೋತ್ರವನ್ನ (ಸಾವಿರ ನಾಮ) ಸೀರೆಯ ಮೇಲೆ ಹೆಣೆದಿದ್ದಾರೆ. ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವ ಈ ಪವಿತ್ರ ಸ್ತೋತ್ರವನ್ನು ಪಠಿಸುತ್ತಾ ಸೀರೆಯ ಮೇಲೆ ಹೆಣೆದು ದಾಖಲಿಸಿದ್ದಾರೆ.

ಈ ಸೀರೆಯನ್ನ ಮನೋಹರ ಹಾಗೂ ವೈಭವಯುತವಾಗಿ ಮುತ್ತು – ಹವಳ – ನವರತ್ನಗಳಿಂದ‌ ಅಲಂಕರಿಸಿದ್ದಾರೆ. ಈ ಸೀರೆಯನ್ನ ಪದ್ಮ ಮಂಜುನಾಥ್ ಕಳೆದ ವರ್ಷ ಶೃಂಗೇರಿ ಮಠಕ್ಕೆ ಆಗಮಿಸಿ ಸೀರೆಯನ್ನ ಉಭಯ ಶ್ರೀಗಳ ಮುಂದೆ ತೋರಿಸಿ ತದನಂತರ ಶೃಂಗೇರಿಯ ಶಾರದಾ ದೇವಿಗೆ ಅರ್ಪಣೆ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com