FIFA 2018 : ಜಪಾನ್ ವಿರುದ್ಧ ರೋಚಕ ಜಯ : ಅಂತಿಮ-8ರ ಘಟ್ಟಕ್ಕೆ ಕಾಲಿಟ್ಟ ಬೆಲ್ಜಿಯಂ..

ಬೆಲ್ಜಿಯಂ ಫುಟ್ಬಾಲ್ ತಂಡ ಫಿಪಾ ವಿಶ್ವಕಪ್-2018 ಟೂರ್ನಿಯ ಅಂತಿಮ ಎಂಟರ ಘಟ್ಟಕ್ಕೆ ಕಾಲಿಟ್ಟಿದೆ. ರೊಸ್ಟೊವ್ ಅರೆನಾದಲ್ಲಿ ಸೋಮವಾರ ನಡೆದ 16ರ ಸುತ್ತಿನ ಪಂದ್ಯದಲ್ಲಿ ಜಪಾನ್ ವಿರುದ್ಧ ಬೆಲ್ಜಿಯಂ 3-2 ಗೋಲುಗಳ ಅಂತರದಿಂದ ಜಯ ಸಾಧಿಸಿ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಜಪಾನ್ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದೆ.

ಬೆಲ್ಜಿಯಂ ಪರವಾಗಿ ಜಾನ್ ವೆರ್ಟೊಂಗೆನ್ (69″), ಮಾರೊಯೆನ್ ಫೆಲ್ಲಾಯಿನಿ (74″) ಹಾಗೂ ನಾಸೆರ್ ಚಾಡ್ಲಿ (90+4″) ಗೋಲ್ ದಾಖಲಿಸಿದರು. ಜಪಾನ್ ಪರವಾಗಿ ಜೆಂಕಿ ಹರಾಗುಚಿ 48ನೇ ನಿಮಿಷದಲ್ಲಿ ಹಾಗೂ ಟಕಾಶಿ ಇನುಯಿ 52ನೇ ನಿಮಿಷದಲ್ಲಿ ಗೋಲ್ ಬಾರಿಸಿದರು.

ಜಲೈ 6ರಂದು ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ, ಬ್ರೆಜಿಲ್ ತಂಡವನ್ನು ಎದುರಿಸಲಿದೆ.

Leave a Reply

Your email address will not be published.