ಉದ್ಯೋಗ ಸೃಷ್ಟಿಸಲು ಸಿಎಂ ಕುಮಾರಸ್ವಾಮಿಗೆ ವಿನಂತಿಸಿ ಆತ್ಮಹತ್ಯೆಗೆ ಶರಣಾದ ಯುವಕ..

ದಾವಣಗೆರೆ : ಸಿಎಂ ಕುಮಾರಸ್ವಾಮಿಗೆ ಉದ್ಯೋಗ ಸೃಷ್ಟಿ ಸಲು ವಿನಂತಿಸಿ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊಸ ನಗರ ಗ್ರಾಮದ ಜಮೀನಿನಲ್ಲಿ ನಡೆದಿದೆ. ನೇಣಿಗೆ ಶರಣಾಗುವ ಮುನ್ನ ಯುವಕ ಮೊಬೈಲ್ ನಲ್ಲಿ ಹೇಳಿಕೆ ರೆಕಾರ್ಡ್ ಮಾಡಿದ್ದ.

ಅನಿಲ್. ಬಿ (22) ನೇಣಿಗೆ ಶರಣಾದ ಯುವಕ ದಾವಣಗೆರೆ ವಿಶ್ವವಿದ್ಯಾಲಯ ದಲ್ಲಿ ಎಂಎ ಓದುತ್ತಿದ್ದ. ‘ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವ ಜನಾಂಗಕ್ಕೆ ಉದ್ಯೋಗ ಸೃಷ್ಠಿ ಮಾಡುತ್ತಿಲ್ಲ. ವಿದ್ಯಾವಂತರು ಕೂಲಿ ಮಾಡುವಂತಾಗಿದೆ. ನನ್ನ ಸಾವಿನಿಂದ ಎಚ್ಚತ್ತು ಕೊಂಡು ಸಿಎಂ ಕುಮಾರಸ್ವಾಮಿ ಉದ್ಯೋಗ ಸೃಷ್ಟಿಸಲಿ. ನನ್ನ ಪರಿಸ್ಥಿತಿ ನನ್ನಂತ ಬಡವರಿಗೆ ಮಾತ್ರ ಅರ್ಥವಾಗುತ್ತದೆ. ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಿ ‘ ಎಂದು ಯುವಕ ಮನವಿ ಮಾಡಿಕೊಂಡಿದ್ದಾನೆ. ಬಸವ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.