ಮಲೆನಾಡಿನಲ್ಲಿ ಭುಗಿಲೆದ್ದ ಬುರ್ಖಾ ವಿವಾದ : ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ಚಿಕ್ಕಮಗಳೂರು : ಮಲೆನಾಡಿನಲ್ಲಿ ಮತ್ತೆ ‌ಬುರ್ಖಾ ವಿವಾದ ಭುಗಿಲೆದ್ದಿದೆ. ಶಿವಮೊಗ್ಗದ ನಂತರ ಶಾಂತಿ ಸಂದೇಶ ಸಾರಿದ ಕುವೆಂಪು ನಾಡು ಮಲೆನಾಡು‌‌ ಚಿಕ್ಕಮಗಳೂರಿನಲ್ಲಿಯೂ ಮತ್ತೆ ಬುರ್ಖಾ ವಿಚಾರ ಮುಂದೆಲೆಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆ‌ ಕೊಪ್ಪ ಪದವಿ ಕಾಲೇಜಿನಲ್ಲಿ ಬುರ್ಖಾ ವಿರೋಧಿಸಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದಾರೆ.

ಬುರ್ಖಾ ಖಂಡಿಸಿ ನೂರಕ್ಕೂ ಹೆಚ್ಷು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಕಳೆದ ಅನೇಕ ವರ್ಷಗಳಿಂದಲೂ ಮುಸ್ಲಿಂ ವಿದ್ಯಾರ್ಥಿಗಳು ಪ್ರತ್ಯೇಕ‌ ಕೊಠಡಿಯಲ್ಲಿ ಸ್ಕಾರ್ಫ್ ಬದಲಿಸಿ‌ ಮಾಮೂಲಿ ಉಡುಪಿನಲ್ಲಿ ತರಗತಿಗೆ ಹಾಜರಾಗುತ್ತಿದ್ದರು.

ಆದರೆ ಇತ್ತೀಚೆಗೆ ಸ್ಕಾರ್ಫ್ ಹಾಕಿಕೊಂಡೇ ತರಗತಿಗೆ ವಿದ್ಯಾರ್ಥಿನಿಯರು ಬರುತ್ತಿದ್ದಕ್ಕೆ ಇನ್ನೊಂದು ಗುಂಪು ವಿರೋಧ ವ್ಯಕ್ತಪಡಿಸಿತ್ತು. ತರಗತಿಗಳಿಗೆ ಬುರ್ಕಾ ಧರಿಸಿ ಬರುತ್ತಿರುವುದನ್ನು‌ ಖಂಡಿಸಿ ಮತ್ತೊಂದು ಗುಂಪು ಕೇಸರಿ ಶಾಲು ಧರಿಸಿ ತರಗತಿಗೆ ಆಗಮಿಸಿ ಅಸಮಧಾ‌ನ ಹೊರಹಾಕಿದೆ. ವಿಷಯ ಸಂಬಂಧ ಕೊಪ್ಪ‌ ಪದವಿ ಕಾಲೇಜು ಪ್ರಾಂಶುಪಾಲ‌ ಅನಂತ್ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com