KSOU ನಲ್ಲಿ ರಂಗಪ್ಪ ಮಾಡಿರುವ ಅಕ್ರಮಗಳಿಗೆ ಭಾರತರತ್ನ ನೀಡಬೇಕು : ಗೋ.ಮಧುಸೂಧನ

‘ ರಂಗಪ್ಪ ಯೂ ಆರ್ ಎ ಗೌರ್ನಮೆಂಟ್ ಫ್ರಾಡ್. ರಂಗಪ್ಪ ಯೂ ಆರ್ ಎ ಗೌರ್ನಮೆಂಟ್ ಚೀಟರ್ ‘ ಎಂದು ಪ್ರತಿಕಾಗೋಷ್ಠಿಯಲ್ಲಿ ದಾಖಲೆಗಳನ್ನ ಪ್ರದರ್ಶಿಸಿ ರಂಗಪ್ಪರನ್ನ ಫ್ರಾಡ್ ಹಾಗೂ ಚೀಟರ್ ಎಂದು ಗೋ.ಮಧುಸೂದನ್ ಕರೆದಿದ್ದಾರೆ.

‘ ಡೆಕ್ ನೋಟಿಸ್‌ಗೆ ಒಂದು ಉತ್ತರ. ತಮ್ಮ ವಿವಿಯ ಪರಿಚಯ ಪುಸ್ತಕದಲ್ಲಿ ಒಂದು ಹೇಳಿಕೆ‌. ಶೈಕ್ಷಣಿಕ ವಿಚಾರದಲ್ಲಿ ಯಾಕೇ ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದ್ದೀರಿ. ಕಾನೂನಿನ ಬಗ್ಗೆ ಮಾತನಾಡುವ ನೀವು ಯಾಕೇ ಕಾನೂನು ಬಾಹಿರ ಚಟುವಟಿಕೆ ಮಾಡಿದ್ರಿ ‘ ಎಂದು ಪ್ರೋ.ರಂಗಪ್ಪರನ್ನು ಗೋ.ಮಧುಸೂದನ್ ಪ್ರಶ್ನಿಸಿದ್ದಾರೆ.

‘ ರಂಗಪ್ಪ ಮಾಡಿರುವ ಅಕ್ರಮಗಳಿಗೆ ಭಾರತ ರತ್ನ ನೀಡಬೇಕು. ಅಕ್ರಮ ಮಾಡಿರುವುದಕ್ಕೆ ಪದ್ಮಭೂಷಣ ಅಥವ ಪದ್ಮವಿಭೂಷಣ ಪ್ರಶಸ್ತಿ ಇದ್ರೆ ಅದನ್ನು ರಂಗಪ್ಪರಿಗೆ ನೀಡಬಹುದು. ಪ್ರಪಂಚದ ಯಾವ ಯೂನಿವರ್ಸಿಟಿಯಲ್ಲು ಮಾಡದ ಅಕ್ರಮ ಕೆಎಸ್ಓಯೂನಲ್ಲಿ ಮಾಡಿದ್ದಾರೆ. SSLC ಕೋರ್ಸ್ ಸಮಾನವಾಗಿ ಗೇಟ್ ಕೋರ್ಸ್. PUC ಸಮಾನಾಗಿ ಬ್ರಿಡ್ಜ್ ಕೋರ್ಸ್ ಆರಂಭಿಸಿದರು. ಯೂನಿವರ್ಸಿಟಿಗಳು ಡಿಗ್ರಿ‌ ನೀಡಲು ಇರೋದು. ಆದ್ರೆ ಇವರು 8 ನೇ ತರಗತಿ ಫೇಲಾದವರಿಗು ಮೋಸ ಮಾಡುವ ಚಿಂತನೆ ಮಾಡಿದ್ದಾರೆ. 8ನೇ ತರಗತಿ ಫೇಲಾದ ಬಡವರಿಗು ಮೋಸ ಮಾಡಿದ ರಂಗಪ್ಪ ಒಬ್ಬ ನೀಚ. ಇವರ ಕ್ರಿಮಿನಲ್ ಬುದ್ದಿ ಇರೋದಕ್ಕೆ ಇವರಿಗೆ ಅಕ್ರಮದ ಭಾರತದ ರತ್ನ ನೀಡಿ ಎಂದಿದ್ದು ‘ ಎಂದು ಮೈಸೂರಿನಲ್ಲಿ ಗೋ.ಮಧುಸೂದನ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com