ದಾವಣಗೆರೆ : ಸರ್ಕಾರಿ ಬಸ್ ಚಾಲನೆ ಮಾಡಿದ ಶಾಸಕ ಎಸ್. ರಾಮಪ್ಪ..

ದಾವಣಗೆರೆ : ಹರಿಹರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿರುವ ಎಸ್. ರಾಮಪ್ಪ ಸರ್ಕಾರಿ ಬಸ್ ಚಾಲನೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ, ಹಲವು ದಶಕಗಳಿಂದ ಬಸ್ ಬಾರದ ಹಳ್ಳಿಗಳಿಗೆ ಸ್ವತಃ ಶಾಸಕರು ಬಸ್ ಚಾಲನೆ ಮಾಡಿದ್ದಾರೆ.

ಸರ್ಕಾರಿ ಬಸ್ ಚಾಲನೆ ಮಾಡುವುದರ ಮೂಲಕ ರಾಮಪ್ಪ ಉದ್ಘಾಟನೆ ಮಾಡಿದ್ದಾರೆ. ಹರಿಹರ ತಾಲೂಕಿನ ನಾಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಬಸ್ ಸೌಕರ್ಯ ಇಲ್ಲದೆ ಪರದಾಡುತ್ತಿದ್ದ ಶಾಲೆ ಮಕ್ಕಳು ಹಾಗೂ ಗ್ರಾಮಸ್ಥರು ಬಸ್ ಆಗಮನದಿಂದ ಸಂತಸಗೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com