FIFA 2018 : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕ್ರೊವೇಶಿಯಾ : ಹೊರನಡೆದ ಡೆನ್ಮಾರ್ಕ್

ಫಿಫಾ ವಿಶ್ವಕಪ್-2018 ಟೂರ್ನಿಯಲ್ಲಿ ಭಾನುವಾರ ನಡೆದ ನಾಕೌಟ್ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಮಣಿಸಿದ ಕ್ರೊವೇಶಿಯಾ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. ನಿಝ್ನಿ ನೊವ್ಹೊರೊಡ್ ಕ್ರೀಡಾಂಗಣದಲ್ಲಿ ನಡೆದ ರೌಂಡ್-16 ಪಂದ್ಯದಲ್ಲಿ ಕ್ರೊವೇಶಿಯಾ, ರೋಚಕ ಪೆನಾಲ್ಟಿ ಶೂಟೌಟ್ ನಲ್ಲಿ 3-2 ರಿಂದ ಜಯಿಸಿದೆ. ಸೋತು ನಿರಾಸೆ ಅನುಭವಿಸಿದ ಡೆನ್ಮಾರ್ಕ್ ಟೂರ್ನಿಯಿಂದ ಹೊರನಡೆದಿದೆ.

Image result for croatia fifa 2018 denmark enters quarter final

90 ನಿಮಿಷಗಳ ಅವಧಿಯ ಮುಕ್ತಾಯದ ನಂತರವೂ ಉಭಯ ತಂಡಗಳ ಸ್ಕೋರ್ 1-1ರಿಂದ ಸಮವಾಗಿತ್ತು. 30 ನಿಮಿಷಗಳ ಹೆಚ್ಚುವರಿ ಸಮಯದಲ್ಲಿಯೂ ಯಾವುದೇ ಗೋಲ್ ದಾಖಲಾಗದೇ ಸ್ಕೋರ್ ಸಮವಾಗಿಯೇ ಉಳಿಯಿತು. ಬಳಿಕ ಪೆನಾಲ್ಟಿ ಶೂಟೌಟ್ ನಲ್ಲಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಯಿತು.

ಪೆನಾಲ್ಟಿ ಶೂಟೌಟ್ ನಲ್ಲಿ ಕ್ರೊವೇಶಿಯಾ ತಂಡದವರು 3 ಗೋಲ್ ದಾಖಲಿಸಿದರೆ, ಡೆನ್ಮಾರ್ಕ್ ಆಟಗಾರರು 2 ಬಾರಿ ಮಾತ್ರ ಚೆಂಡನ್ನು ಗೋಲು ಪೆಟ್ಟಿಗೆಯನ್ನು ಸೇರಿಸುವಲ್ಲಿ ಸಫಲರಾದರು.

Leave a Reply

Your email address will not be published.

Social Media Auto Publish Powered By : XYZScripts.com