ಹಾಸನ : ತನ್ನ ಸಾವಿಗೆ ಪತ್ನಿಯೇ ಕಾರಣವೆಂದು ಬರೆದಿಟ್ಟು ಪತಿ ಆತ್ಮಹತ್ಯೆ..

ತನ್ನ ಸಾವಿಗೆ ಪತ್ನಿಯೇ ಕಾರಣವೆಂದು ಬರೆದಿಟ್ಟು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ತಾಲ್ಲೂಕಿನ ಮರ್ಕುಲಿ‌ ಗ್ರಾಮದಲ್ಲಿ ನಡೆದಿದೆ. 45 ವರ್ಷದ ರಾಘವೇಂದ್ರ ಎಂಬ ವ್ಯಕ್ತಿ ‘ ನನ್ನ‌ ಸಾವಿಗೆ ನನ್ನ‌‌ಹೆಂಡತಿಯೇ ಕಾರಣ ‘ ಎಂದು ಬರೆದು ಸಹಿಮಾಡಿ ವಿಷ‌ ಸೇವಿಸಿದ್ದಾನೆ.

ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಕಿಮ್ಸ್ ನಲ್ಲಿ‌ ಸಾವನ್ನಪ್ಪಿದ್ದಾನೆ. ಹಲವು ವರ್ಷಗಳಿಂದ ಪತಿ ಪತ್ನಿ ನಡುವೆ ಕೌಟುಂಬಿಕ‌ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಪತ್ನಿ ಆಶಾ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com