WATCH : ಡಾಲರ್ ಎದುರು ರೂಪಾಯಿ ಬೆಲೆ ಕುಸಿತಕ್ಕೆ ಮೋದಿ ಕಾರಣ ಎಂದ ಬಿಜೆಪಿ ಎಂ.ಪಿ..!

ಸದ್ಯ ಕರಾವಳಿ ತುಂಬ ಈಗ ಡಾಲರ್ ನದ್ದೇ ಮಾತು. ಸಾಮಾಜಿಕ ಜಾಲತಾಣಗಳಲ್ಲೂ ಡಾಲರ್ ದೇ ಸದ್ದು. ರಾಜಕಾರಣಿಗಳ ಬಾಯಲ್ಲೂ ಕೂಡಾ ಡಾಲರ್ .ಅಂದಹಾಗೆ ಇದು ಅಮೆರಿಕನ್ ಡಾಲರ್ ಅಲ್ಲ ಬದಲಾಗಿ ಸಂಸದ‌ ನಳೀನ್ ಕುಮಾರ್ ಕಟೀಲ್ ಅವ್ರ ಡಾಲರ್ ವಿಡಿಯೋ‌.

ಹೌದು ದಕ್ಷಿಣ ಕನ್ನಡ ಸಂಸದ ನಳೀನ್‌ ಕುಮಾರ್ ಈ ಭಾಷಣ ಒಮ್ಮೆ ಕೇಳಿ. ಈ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಅಗ್ತಿದೆ.ಸಂಸದ ಡಾಲರ್ ಲೆಕ್ಕಾಚಾರ ಫೇಸ್ ಬುಕ್ ತುಂಬ ಫೇಮಸ್ ಅಗಿದೆ. ಕೇರಳದ‌ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ನಳೀನ್ ಕುಮಾರ್ ಕಟೀಲ್ ಡಾಲರ್ ಈಗ ೬೦ ರೂ ಕೊಡುತ್ತೇವೆ ಮುಂದಿನ‌ ಎರಡು ವರುಷದಲ್ಲಿ ಒಂದು ರೂಪಾಯಿಗೆ ೧೫ ಡಾಲರ್ ಸಿಗುವ ದಿನ ಬರುತ್ತೆ ಅದಕ್ಕೆ ಕಾರಣ ಮೋದಿ ಆಡಳಿತ ಎಂದೆಲ್ಲಾ ವೈಭವಿಕರಿಸುತ್ತಾ ಭಾರೀ ಭಾಷಣ ಮಾಡಿದ್ದರು. ಈ ಭಾಷಣ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಅಗ್ತಿದೆ. ಅಷ್ಟಕ್ಕೂ ನಳಿನ್ ಕುಮಾರ್ ಕಟೀಲ್ ಡಾಲರ್ ಲೆಕ್ಕಾಚಾರ ಕೇಳಿದ್ರೆ ನೀವೂ ಬೆಚ್ವಿ‌ಬೀಳ್ತೀರಾ.

ಲೋಕಸಭಾ ಚುನಾವಣೆಯ ಹತ್ತಿರವಾಗ್ತಿದ್ದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಡಾಲರ್ ವಿಡಿಯೋ ವಿರೋಧ ಪಕ್ಷಗಳಿಗೂ ಚುನಾವಣಾ ಅಸ್ತ್ರವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡ ಮಾಜಿ ಸಚಿವ ರಮಾನಾಥ್ ರೈ ಸದ್ಯ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಕಣಕ್ಕಿಳಿಯೋ ಯೋಜನೆಯಲ್ಲಿದ್ದಾರೆ. ಇದಕ್ಕೆ ಪೂರ್ವ ತಯಾರಿ ಈಗಾಗಲೇ ಶುರುಮಾಡಿಕೊಂಡಿದ್ದಾರೆ. ಇದೀಗ ತಮ್ಮ ಎದುರಾಳಿಯನ್ನ ಮಣಿಯೋ ಯೋಜನೆಗೆ ಕೈಹಾಕೊಂಡಿರೋ ರಮಾನಾಥ್ ರೈ ಹಾಗೂ ಕಾಂಗ್ರೆಸ್ ಪಾಲಿಕೆ ಸಂಸದ ನಳಿನ್ ಕುಮಾರ್ ಕಟೀಲ್ ಡಾಲರ್ ವಿಡಿಯೋ ಉಪಯೋಗಕ್ಕೆ ಬಂದಿದೆ. ಎಂ ಪಿ ನಳಿನ್ ವಿರುದ್ಧ ಹರಿಹಾಯ್ದ ಮಾಜಿ ಸಚಿವ ರಮಾನಾಥ್ ರೈ ಹಾಲಿ ಸಂಸದರಿಗೆ ಡಾಲರ್ ಬಗ್ಗೆ ಕೂಡಾ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಅದೇನೇ ಇದ್ರೂ ಸಂಸದರಾಗಿರೋ ನಳಿನ್ ಕುಮಾರ್ ಕಟೀಲ್ ಡಾಲರ್ ಲೆಕ್ಕಾಚಾರದ ಅರಿವು ಪಡೆದುಕೊಳ್ಳಬೇಕಾಗಿದೆ. ಮಾತಿನ ಭರದಲ್ಲಿ ಡಾಲರ್ ಬಗ್ಗೆ ಹೇಳಿಕೆ ನೀಡಿ ಸದ್ಯ ಟ್ರೋಲರ್ ಗಳ ಟೀಕೆಗೆ ಗುರಿಯಾಗಿದ್ದಾರೆ. ಈ ನಡುವೆ ಡಾಲರ್ ಮುಂದೆ ರುಪಾಯಿ ಮೌಲ್ಯ ಕುಸಿತ ಕಂಡಿರೋದು ಕೂಡಾ ವಿರೋಧ ಪಕ್ಷಗಳ ಟ್ರೋಲ್ ಟೀಮ್ ಗಳಿಗೆ ಅಸ್ತ್ರ ಸಿಕ್ಕಂತಾಗಿದೆ. ಒಟ್ಟಿನಲ್ಲಿ‌ ಕಟೀಲ್ ಡಾಲರ್ ಮಾತು ಚುನಾವಣೆಯಲ್ಲಿ ಹೇಗೆಲ್ಲಾ ಟ್ರೋಲ್ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com