FIFA 2018 : ಕ್ವಾರ್ಟರ್ ಫೈನಲ್‍ಗೆ ಆತಿಥೇಯ ರಷ್ಯಾ : ಟೂರ್ನಿಯಿಂದ ನಿರ್ಗಮಿಸಿದ ಸ್ಪೇನ್

ಆತಿಥೇಯ ರಷ್ಯಾ ಫಿಫಾ ವಿಶ್ವಕಪ್-2018 ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಭಾನುವಾರ ನಡೆದ 16ರ ಸುತ್ತಿನ ಪಂದ್ಯದಲ್ಲಿ ರಷ್ಯಾ ಬಲಿಷ್ಠ ಸ್ಪೇನ್ ತಂಡವನ್ನು ರೋಚಕ ಪೆನಾಲ್ಟಿ ಶೂಟೌಟ್ ನಲ್ಲಿ 4-3 ರಿಂದ ಮಣಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದೆ.

Image result for fifa russia spain penalty shootout

90 ನಿಮಿಷಗಳ ಅವಧಿ ಪೂರ್ಣಗೊಂಡರೂ ಎರಡೂ ತಂಡಗಳ 1-1 ರಿಂದ ಸ್ಕೋರ್ ಸಮವಾಗಿತ್ತು. ನಂತರ ಆಟವನ್ನು ಮುಂದುವರೆಸಲಾಯಿತಾದರೂ, 30 ನಿಮಿಷಗಳ ಎಕ್ಸ್ಟ್ರಾ ಟೈಮ್ ನಲ್ಲಿಯೂ ಯಾವುದೇ ಗೋಲ್ ದಾಖಲಾಗಲಿಲ್ಲ. ಕೊನೆಗೆ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ನಿರ್ಧರಿಸಲಾಯಿತು.

ಪೆನಾಲ್ಟಿ ಶೂಟೌಟ್ ನಲ್ಲಿ ರಷ್ಯಾ ಚೆಂಡನ್ನು 4 ಬಾರಿ ಗೋಲ್ ಪೆಟ್ಟಿಗೆ ಸೇರಿಸಿದರೆ, ಸ್ಪೇನ್ 3 ಸಲ ಮಾತ್ರ ಗೋಲ್ ದಾಖಲಿಸಿದರು. 2010ರಲ್ಲಿ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದ ಸ್ಪೇನ್ ಆತಿಥೇಯರ ಎದುರು ಸೋತು ಟೂರ್ನಿಯಿಂದ ನಿರ್ಗಮಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com