FIFA 2018 : ಕ್ವಾರ್ಟರ್ ಫೈನಲ್‍ಗೆ ಅಡಿಯಿಟ್ಟ ಬ್ರೆಜಿಲ್ : ಮೆಕ್ಸಿಕೊ ತಂಡಕ್ಕೆ ನಿರಾಸೆ

5 ಬಾರಿಯ ವಿಶ್ವಚಾಂಪಿಯನ್ ಬ್ರೆಜಿಲ್ ಫಿಫಾ ವಿಶ್ವಕಪ್-2018 ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಸೋಮವಾರ ಸಮಾರಾ ಅರೆನಾ ಕ್ರೀಡಾಂಗಣದಲ್ಲಿ ನಡೆದ ಮೆಕ್ಸಿಕೊ ತಂಡವನ್ನು 2-0 ಗೋಲ್ ಅಂತರದಿಂದ ಮಣಿಸಿದ ಬ್ರೆಜಿಲ್ ಅಂತಿಮ-8ರ ಘಟ್ಟವನ್ನು ತಲುಪಿದೆ.

ಪಂದ್ಯದ ಮೊದಲರ್ಧದಲ್ಲಿ ಉಭಯ ತಂಡಗಳಿಂದ ಯಾವುದೇ ಗೋಲ್ ದಾಖಲಾಗಲಿಲ್ಲ. ದ್ವಿತೀಯಾರ್ಧದ 51ನೇ ನಿಮಿಷದಲ್ಲಿ ಫಾರ್ವರ್ಡ್ ಆಟಗಾರ ನೆಯ್ಮರ್ ಜೂನಿಯರ್ ಮೊದಲ ಗೋಲ್ ದಾಖಲಿಸಿ ಬ್ರೆಜಿಲ್ ತಂಡಕ್ಕೆ ಮುನ್ನಡೆ ಒದಗಿಸಿದರು. ನಂತರ 88ನೇ ನಿಮಿಷದಲ್ಲಿ ರಾಬರ್ಟೊ ಫರ್ಮಿನೊ ಗೋಲ್ ಬಾರಿಸಿ ಗೆಲುವಿನ ಅಂತರವನ್ನು ಮತ್ತಷ್ಟು ಹಿಗ್ಗಿಸಲು ಕಾರಣರಾದರು.

ಕಳೆದ ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಜರ್ಮನಿ ಎದುರು ನಿರಾಸೆ ಅನುಭವಿಸಿದ್ದ ಬ್ರೆಜಿಲ್ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಮುನ್ನಡೆದಿದೆ. ಜರ್ಮನಿ ಅರ್ಜೆಂಟೀನಾ, ಪೋರ್ಚುಗಲ್, ಸ್ಪೇನ್ ನಂತಹ ಬಲಿಷ್ಠ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ.

 

Leave a Reply

Your email address will not be published.

Social Media Auto Publish Powered By : XYZScripts.com