‍Food & Taste : ತರಕಾರಿ, ಹಣ್ಣುಗಳ ವಿವಿಧ ಫ್ಲೇವರ್​ ಗಳ ರಸಗುಲ್ಲಾ ….

ರಸಗುಲ್ಲಾ ಹೆಸರು ಕೇಳಿದ್ರೇನೆ ಬಾಯಲ್ಲಿ ನೀರೂರುತ್ತೆ. ಸಿಹಿ ಖಾದ್ಯ ರಸಗುಲ್ಲಾ ದಿಲ್ಲಿಯಿಂದ ಹಿಡಿದು ಹಳ್ಳಿಯವರೆಗೆ ಹೆಸರು ಮಾಡಿದೆ. ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರೂ ಸಹ ರಸಗುಲ್ಲಾ ಖಾದ್ಯಕ್ಕೆ ಮನಸೋಲ್ತಾರೆ. ಬಾಯಿ ಚಪ್ಪರಿಸಿ… ರಸಗುಲ್ಲಾ ಸವೀತಾರೆ. ರಸಗುಲ್ಲಾದ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ…
 ಬರಿ ಸಕ್ಕರೆ ಪಾನಕ, ಮೈದಾ ಹಿಟ್ಟಿನಿಂದ ತಯಾರಾಗೋ ರಸಗುಲ್ಲಾ ಹೆಸರು ಕೇಳಿಯೇ ನಾವು ಬಾಯಿ ಚಪ್ಪರಿಸ್ತೀವಿ. ಆದ್ರೆ ಇಲ್ಲೊಬ್ರು ತರಕಾರಿ, ಹಣ್ಣುಗಳ ವಿವಿಧ ಫ್ಲೇವರ್​ಗಳಿಂದ ಕೂಡಿರೋ 270ಕ್ಕೂ ಹೆಚ್ಚು ರಸಗುಲ್ಲಾಗಳನ್ನ ತಯಾರಿಸಿ, ರಸಗುಲ್ಲಾ ಕ್ವೀನ್​ ಅಂತಾ ಖ್ಯಾತಿ ಪಡೆದಿದ್ದಾರೆ. ಅವರೇ ಕೋಲ್ಕತ್ತಾ ಮೂಲದ ಸ್ವಾತಿ.
ಸ್ಟ್ರಾಬೆರಿ, ನೇರಳೆ, ದ್ರಾಕ್ಷಿ, ಹಸಿರು ಸೇಬು, ಕಿತ್ತಳೆ, ಬಾಳೆಹಣ್ಣು, ಕಲ್ಲಂಗಡಿ, ಜೀರಿಗೆ, ಮೆನಸಿನಕಾಯಿ, ಪುದಿನಾ, ಅಯ್ಯೋ… ಹೇಳ್ತಾ ಹೋದ್ರೆ ತುಂಬಾ ಇವೆ.. ಹೀಗೆ ವೆರೈಟಿ ವೆರೈಟಿ ರಸಗುಲ್ಲಾ… ಇದೆನ್ನೆಲ್ಲ ತಯಾರಿಸಿರೋದು ಸ್ವಾತಿ. ಸ್ವಾರಸ್ಯಕರ ವಿಷಯ ಏನಂದ್ರೆ ರಸಗುಲ್ಲಾ ಮೂಲ ನಮ್ಮದು, ನಮ್ಮ ರಾಜ್ಯ ಮೊದಲು ರಸಗುಲ್ಲಾ ಖಾದ್ಯವನ್ನ ದೇಶಕ್ಕೆ ಪರಿಚಯಿಸಿದೆ ಅಂತಾ ಪಶ್ಚಿಮ ಬಂಗಾಳ ಮತ್ತು ಕೋಲ್ಕತ್ತಾ ರಾಜ್ಯಗಳು ಪೈಪೋಟಿ ನಡೆಸ್ತಿವೆ. ಇದರ ಮಧ್ಯೆ ಸ್ವಾತಿ 270 ವೆರೈಟಿ ರಸಗುಲ್ಲಾ ತಯಾರಿಸಿ ಹುಬ್ಬೇರುವಂತೆ ಮಾಡಿದ್ದಾರೆ.
2016ರಿಂದ ವಿವಿಧ ಫ್ಲೇವರ್​ಗಳ ರಸಗುಲ್ಲಾ ತಯಾರಿಸೋಕೆ ಶುರು ಮಾಡಿದ ಸ್ವಾತಿ, ಸಾಕಷ್ಟು ಹೆಸರು ಮಾಡಿದ್ದಾರೆ. ಪಶ್ಚಿಮ ಬಂಗಾಳಿಗರ ಫೇವರೆಟ್​ ಸಿಹಿ ಅಂದ್ರೆ, ರಸಗುಲ್ಲಾ. ಜನರಿಗೆ ವೆರೈಟಿ ರಸಗುಲ್ಲಾ ಪರಿಚಯಿಸಬೇಕು. ರಸಗುಲ್ಲಾವನ್ನು ಮತ್ತು ದೇಶೀಯ ಖಾದ್ಯವನ್ನು ಯುವ ಜನಾಂಗ ರುಚಿ ನೋಡ್ತಿಲ್ಲ. ಪಿಜ್ಜಾ, ಬರ್ಗರ್​ಗೆ ಯುವ ಜನತೆ ಮುಗಿ ಬೀಳ್ತಿದ್ದು, ರಸಗುಲ್ಲಾ ವಿದೇಶಿ ಖಾದ್ಯಕ್ಕೆ ಪೈಪೋಟಿ ನೀಡ್ತಿದೆ. 300 ಮದುವೆ ಸಮಾರಂಭ, ವಿವಿಧ ಪಾರ್ಟಿಗಳು, ಸೇರಿದಂತೆ ಆನ್​ಲೈನ್​ನಲ್ಲೂ ಸ್ವಾತಿ ರಸಗುಲ್ಲಾ ಮಾರಾಟ ಮಾಡ್ತಾರೆ. ಒಳ್ಳೆಯ ಹೆಸರು ಗಳಿಸಿದ್ದಾರೆ.
ಈಗ ದೇಶಾದ್ಯಂತ ಸ್ವಾತಿ ಮಾಡಿರೋ ರಸಗುಲ್ಲಾ ಸಿಹಿ ತಿಂಡಿ ಸದ್ದು ಮಾಡ್ತಿದೆ. ಸ್ವಾತಿ ಅವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಸಗುಲ್ಲಾ ಪ್ರಿಯರು ಸಖತ್​ ಖುಷಿಯಾಗಿದ್ದಾರೆ…
-ಧರಿ

Leave a Reply

Your email address will not be published.

Social Media Auto Publish Powered By : XYZScripts.com