ಬಜೆಟ್‍ನಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಇತ್ಯರ್ಥಕ್ಕೆ ಒತ್ತು ನೀಡಿ : ರಂಭಾಪುರಿ ಶ್ರೀ ಕಿವಿಮಾತು

ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಇದೇ 5ರಂದು ಮಂಡನೆಯಾಗಲಿದ್ದು, ಬಜೆಟ್ ನಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸರ್ಕಾರಕ್ಕೆ ರಂಭಾಪುರಿ ಜಗದ್ಗುರುಗಳು ಕಿವಿಮಾತು ಹೇಳಿದ್ದಾರೆ.

ಜಾತಿ, ಧರ್ಮ ಹೆಸರಿನಲ್ಲಿ ನಡೆಯುತ್ತಿರುವ ಸಂಘರ್ಷ ಒಳ್ಳೆಯದಲ್ಲ. ಈ ಉತ್ತಮ ಮುಂಗಾರು ಮಳೆಯ ಸೂಚನೆ ಸಿಕ್ಕಿದೆ. ಮಾತಿನಂತೆ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ದಕ್ಷಿಣ ಕರ್ನಾಟಕದ ಯೋಜನೆಗಳಂತೆ ಉತ್ತರ ಕರ್ನಾಟಕದ ಯೋಜನೆಗಳು ವೇಗವಾಗಿ ನಡೆಯಬೇಕು ಎಂದು ಬೆಳಗಾವಿಯಲ್ಲಿ ರಂಭಾಪುರ ಶ್ರೀಗಳು ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com