FIFA 2018 : ಕ್ವಾರ್ಟರ್ ಫೈನಲ್‍ಗೆ ಲಗ್ಗೆಯಿಟ್ಟ ಫ್ರಾನ್ಸ್ : ಟೂರ್ನಿಯಿಂದ ಹೊರನಡೆದ ಅರ್ಜೆಂಟೀನಾ

ಶನಿವಾರ ನಡೆದ ಫಿಫಾ ವಿಶ್ವಕಪ್ ನ 16ರ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ 4-3 ಗೋಲ್ ಅಂತರದಿಂದ ಜಯಗಳಿಸಿದೆ. ಇದರೊಂದಿಗೆ ಫ್ರಾನ್ಸ್ ಫಿಫಾ ವಿಶ್ವಕಪ್ 2018 ಟೂರ್ನಿಯ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದು, ಅರ್ಜೆಂಟೀನಾ ಟೂರ್ನಿಯಿಂದ ನಿರ್ಗಮಿಸಿದೆ.

ಫ್ರಾನ್ಸ್ ಪರವಾಗಿ ಆ್ಯಂಟೋನಿ ಗ್ರೀಜ್ಮ್ಯಾನ್ (13″) ಮತ್ತು ಬೆಂಜಮಿನ್ ಪವಾರ್ಡ್ (57) ತಲಾ ಒಂದು ಹಾಗೂ ಕೈಲಿಯಾನ್ ಎಮ್ಬಾಪ್ಪೆ (64″ & 68″) ಎರಡು ಗೋಲ್ ದಾಖಲಿಸಿದರು. ಅರ್ಜೆಂಟೀನಾ ಪರವಾಗಿ ಏಂಜೆಲ್ ಡಿ ಮರಿಯಾ, ಗೇಬ್ರಿಯಲ್ ಮೆರ್ಕಾಡೊ ಹಾಗೂ ಸರ್ಜಿಯೊ ಆಗ್ಯುಯೆರೊ ಗೋಲ್ ಬಾರಿಸಿದರು.

ಪ್ರಮುಖ ಸ್ಟ್ರೈಕರ್ ಲಯೊನೆಲ್ ಮೆಸ್ಸಿ ಟ್ರೋಫಿ ಕನಸು ಕೂಡ ಈಡೇರಲಿಲ್ಲ. 2014ರ ವಿಶ್ವಕಪ್ ಫೈನಲ್ ನಲ್ಲಿ ಜರ್ಮನಿ ಎದುರು ಸೋತು ನಿರಾಸೆ ಅನುಭವಿಸಿದ್ದ ಅರ್ಜೆಂಟೀನಾ ಈ ಬಾರಿ ಕ್ವಾರ್ಟರ್ ಫೈನಲ್ ಕೂಡ ತಲುಪದೇ ಹೊರನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com