ವರದಕ್ಷಿಣೆ ಕಿರುಕುಳ : ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಗೆ ವಿಷ ಕುಡಿಸಿದ ಪೋಲೀಸ್ ಪೇದೆ..

ಪೋಲೀಸ್ ಪೇದೆಯೊಬ್ಬ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅರಕಲಗೂಡು ತಾಲೂಕು ಮಸತ್ತೂರಿನಲ್ಲಿ ನೆಡೆದಿದೆ.  ಕೊಣನೂರು ಠಾಣೆ ಪೇದೆ ಅರುಣ್ ಪತ್ನಿ ರೂಪಾ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಪತ್ನಿಗೆ ಬಲವಂತವಾಗಿ ವಿಷ ಕುಡಿಸಿದ್ದಾನೆ.

ಪೊಲೀಸ್ ಪೇದೆ ಅರುಣ್ ಕುಟುಂಬದವರು ಮಹಿಳೆಯ ಮರ್ಮಾಂಗಕ್ಕೆ ಖಾರದ ಪುಡಿ ಹಾಕಿ ಹಿಂಸಿಸಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಾದ ರೂಪಾ ಕುಟುಂಬದವರಿಗೆ ಕರೆ ಮಾಡಿ ಅರುಣ್ ಪುನಃ ಬೆದರಿಕೆಯೊಡ್ಡಿದ್ದಾನೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.