Mass suicide in delhi : ನೇಣು ಬಿಗಿದ ಸ್ಥಿತಿಯಲ್ಲಿ ಒಂದೇ ಕುಟುಂಬದ 11 ಮಂದಿ ..

ಇಂದು ಬೆಳ್ಳಂಬೆಳಗ್ಗೆ ಉತ್ತರ ದೆಹಲಿಯ ಬುರಾರಿಯಾದಲ್ಲಿ ಒಂದೇ ಕುಟುಂಬದ 11 ಮಂದಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಟುಂಬದ 7 ಜನ ಮಹಿಳೆಯರು, 4 ಜನ ಪುರುಷರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದ ಸುತ್ತ ಅನು7ಮಾನದ ಹುತ್ತವೇ ಬೆಳದಿದ್ದು, ಅಪರಾಧ ವಿಭಾಗದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
 ನಾರಾಯಣ ದೇವಿ (77), ಪ್ರತಿಭಾ (57), ಭವನೇಶ್​ (50), ಲಲಿತ್​ ಭಾಟಿಯಾ (45), ಸವಿತಾ (48), ಮೀನು (23), ನಿಧಿ (25), ಧೃವ (15), ಟೀನಾ (42), ಶಿವಂ (15), ಪ್ರಿಯಾಂಕಾ (33) ಮೃತ ದುರ್ದೈವಿಗಳು. ಹಗ್ಗದಿಂದ ಕೈಕಟ್ಟಿ, ಮಕ್ಕಳ ಬಾಯಿಗೆ ಮತ್ತು ಕಣ್ಣಿಗೆ ಬಟ್ಟೆ ಕಟ್ಟಿ ನೇಣು ಹಾಕಲಾಗಿದೆ. ಇನ್ನೂ ಒಬ್ಬ ಮನೆಯ ಸದಸ್ಯ ಮಹಡಿ ಮೇಲಿನ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಕುಟುಂಬದವರಲ್ಲಿ ಒಬ್ಬರಾದ ಭವನೇಶ್​ ಕಿರಾಣಿ ಅಂಗಡಿಯೊಂದನ್ನ ಇಟ್ಟುಕೊಂಡಿದ್ರು. ದಿನವೂ ಬೆಳಗ್ಗೆ 6ಗಂಟೆಗೆ ಅಂಗಡಿ ತೆರೆಯುತ್ತಿದ್ದ ಭವನೇಶ್​ 7 ಗಂಟೆಯಾದ್ರೂ ಅಂಗಡಿ ತೆರೆದಿರಲಿಲ್ಲ. ಇದರಿಂದ ಪಕ್ಕದ ಮನೆಯ ಅಮ್ರಿಕ್​ ಸಿಂಗ್​ ಎಂಬಾತ ಭವನೇಶ್​ ಮನೆಗೆ ತೆರಳಿದಾಗ ವಿಷಯ ಬಯಲಾಗಿದೆ.
ಘಟನಾ ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು, ಮೃತದೇಹಗಳನ್ನು ಪೋಸ್ಟ್​ಮಾಟಮ್​ಗೆ ಕಳುಹಿಸಲಾಗಿತ್ತು. ವರದಿ ಬಂದ ನಂತರ ಇನ್ನಷ್ಟು ವಿಷಯ ತಿಳಿದು ಬರಲಿದೆ. ಸ್ಥಳಕ್ಕೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಬಿಜೆಪಿ ಮುಖ್ಯಸ್ಥ ಮನೋಜ್​ ತಿವಾರಿ ಭೇಟಿ ನೀಡಿ, ಪ್ರಕರಣದ ತನಿಖೆಯನ್ನ ನಡೆಸಲಾಗುವುದು ಅಂತಾ ತಿಳಿಸಿದ್ದಾರೆ. ನಾರಾಯಣ ದೇವಿ ಮಕ್ಕಳಲ್ಲಿ ಒಬ್ಬಳಾದ ಸುಜಾತಾ ಪಾಣಿಪತ್​ನಲ್ಲಿ ವಾಸ ಮಾಡುತ್ತಿದ್ದಳು. ದೆಹಲಿಯಲ್ಲಿ ನಮ್ಮ ಕುಟುಂಬ ಖುಷಿ ಖುಷಿಯಾಗೇ ಇತ್ತು. ಯಾರೋ ದುಷ್ಕರ್ಮಿಗಳು ನಮ್ಮ ಕುಟುಂಬಸ್ಥರನ್ನ ಕೊಲೆ ಮಾಡಿದ್ದಾರೆ. ಸೂಕ್ತ ತನಿಖೆ ಮಾಡಿ ಹಂತಕರಿಗೆ ಶಿಕ್ಷೆ ನೀಡಬೇಕು ಅಂತಾ ಆಗ್ರಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com