ಮಂಡ್ಯ : ಆಟ ಆಡುವಾಗ ಕುಕ್ಕರ್ ವಿಷಲ್ ನುಂಗಿ 1 ವರ್ಷದ ಮಗು ಸಾವು..

ಮಂಡ್ಯ : ಕುಕ್ಕರ್ ವಿಷಲ್ ನುಂಗಿ 1 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ. ಮರಿಲಿಂಗೇಗೌಡ ಮತ್ತು ರೂಪ ದಂಪತಿಗಳ ಪುತ್ರ ಭುವನ್ ಗೌಡ (1) ಸಾವನ್ನಪ್ಪಿದೆ.

ನೆನ್ನೆ ರಾತ್ರಿ ಮನೆಯಲ್ಲಿ ಆಟ ಆಡುವಾಗ ಮಗು ಕುಕ್ಕರ್ ವಿಷಲ್ ನುಂಗಿತ್ತು. ಪೋಷಕರು ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಮದ್ದೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com