ಸಾಲಮನ್ನಾ ವಿಚಾರ : ಇನ್ನು 5 ದಿನಗಳಲ್ಲಿ ಸಿಹಿ ಸುದ್ದಿ ನಿರೀಕ್ಷಿಸಿ.. : ಎಚ್.ಡಿ ರೇವಣ್ಣ

ಚಿಕ್ಕಮಗಳೂರು : ಸಾಲಮನ್ನಾ ವಿಚಾರವಾಗಿ ಎಚ್ ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದು, ‘ ಐದು ದಿನಗಳಲ್ಲಿ ರಾಜ್ಯದ ಜನರು ಸಿಹಿ ಸುದ್ದಿ ನಿರೀಕ್ಷಿಸಿ, ಸಂಪೂರ್ಣ ಅಥವಾ ಭಾಗಶ: ಸಾಲಮನ್ನಾ ಎಂಬುದರ ಬಗ್ಗೆ ಗೊಂದಲ‌ ಬೇಡ ‘ ಎಂದಿದ್ದಾರೆ.

‘ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಜೊತೆ ನಮ್ಮ ಕೆಲ ಅಂಶಗಳನ್ನು ಸೇರಿಸಲಾಗುತ್ತದೆ. ರಾಜ್ಯದ ಚಾರ್ಮಾಡಿ, ಶಿರಾಡಿ, ಆಗುಂಬೆ ಸೇರಿದಂತೆ ಕರಾವಳಿಗೆ ಸಂಪರ್ಕ‌ ಕಲ್ಪಿಸುವ ನಾಲ್ಕು ಘಾಟಿಗಳ ಪರಿಶೀಲನೆ ನಡೆಸಿದ್ದೇನೆ. ಚಾರ್ಮಾಡಿ ಘಾಟಿಯ ಸಮಗ್ರ ಅಭಿವೃದ್ದಿಗೆ 250 ಕೋಟಿ ಪ್ರಸ್ತಾವನೆ ಸಲ್ಲಿಸಲಾಗುವುದು ‘ ಎಂದು ಚಿಕ್ಕಮಗಳೂರಿನಲ್ಲಿ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.