ಸ್ವಚ್ಛತೆ ಪರಿಶೀಲಿಸಲು ಬಸ್ ನಿಲ್ದಾಣದ ಮಹಿಳಾ ಶೌಚಾಲಯಕ್ಕೆ ತೆರಳಿದ ಸಾರಿಗೆ ಸಚಿವ..!

ಚಿಕ್ಕಮಗಳೂರು : ಸ್ವಚ್ಚತೆಯನ್ನು ಪರಿಶೀಲಿಸಲು ಬಸ್ ನಿಲ್ದಾಣದಲ್ಲಿನ ಮಹಿಳಾ ಶೌಚಾಲಯಕ್ಕೆ ರಾಜ್ಯ ಸಮ್ಮಿಶ್ರ ಸರ್ಕಾರದ ಸಾರಿಗೆ ಸಚಿವ ಡಿಸಿ ತಮ್ಮಣ್ಣ ತೆರಳಿದ್ದಾರೆ. ಚಿಕ್ಕಮಗಳೂರಿನ ಕೆ ಎಸ ಆರ್ ಟಿ ಸಿ ಬಸ್ ನಿಲ್ದಾಣದ ಮಹಿಳಾ‌ ಶೌಚಾಲಯಕ್ಕೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ದಿಡೀರ್ ಭೇಟಿ ಕೊಟ್ಟಿದ್ದಾರೆ.

ಶೌಚಾಲಯಕ್ಕೆ ಸಾರಿಗೆ ಸಚಿವರ ಧಿಡೀರ್ ಭೇಟಿಯಿಂದ ಮಹಿಳೆಯರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಶೌಚಾಲಯದಲ್ಲಿ ನೀರು ಇಲ್ಲದ‌ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸಚಿವ ಡಿ.ಸಿ ತಮ್ಮಣ್ಣ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com