ಚಿಕ್ಕಬಳ್ಳಾಪುರ : ಕೋಳಿಗೂ ಟಿಕೆಟ್ ನೀಡಿದ ಬಸ್ ಕಂಡಕ್ಟರ್ : ನಿಬ್ಬೆರಗಾದ ಸಾರ್ವಜನಿಕರು..!

ಚಿಕ್ಕಬಳ್ಳಾಪುರ : ಬಸ್ ಕಂಡಕ್ಸರ್ ಒಬ್ಬಾತ ಕೋಳಿಗೂ ಟಿಕೆಟ್ ನೀಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ನಡೆದಿದೆ. ತಾಲ್ಲೂಕಿನ ಮೂದಲೂಡ ಗ್ರಾಮದ ಶ್ರೀನಿವಾಸ್ ಎಂಬವರಿಗೆ ಕಂಡಕ್ಟರ್ ಟಿಕೆಟ್ ನೀಡಿದ್ದಾರೆ.

ಭಾನುವಾರ ಬಾಡೂಟಕ್ಕೆ ಕೋಳಿ ಜೊತೆ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಶ್ರೀನಿವಾಸ್ ಭಾನುವಾರದ ಗೌರಿಬಿದನೂರು ಸಂತೆಯಿಂದ ಕೋಳಿ ಖರೀದಿಸಿದ್ದರು. ಕೋಳಿ ಬ್ಯಾಗ್ನಲ್ಲಿ ಇರಿಸಿಕೊಂಡು ಊರಿಗೆ ಹಿಂದಿರುಗುವಾಗ ಕಂಡಕ್ಟರ್ ಟಿಕೆಟ್ ನೀಡಿದ್ದಾರೆ.

ಶ್ರೀನಿವಾಸ್ ಗೆ 24 ರೂ ಮತ್ತು ಎರಡು ಕೋಳಿಗೆ 12 ರೂ ನಂತೆ 24 ರೂ ಟಿಕೆಟ್ ನೀಡಿದ್ದಾರೆ. ಕೋಳಿಗೂ ಟಿಕೆಟ್ ನೀಡಿದಕ್ಕೆ ಸಾರ್ವಜನಿಕರು ನಿಬ್ಬೆರಗಾಗಿದ್ದಾರೆ. ಕಾನೂನು ಇರೋದೆ ಹಾಗೆ ಎಂದ ಕಂಡೆಕ್ಟರ್ ಮಾತಿಗೆ ದಂಗಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com