ವಚನ ಭ್ರಷ್ಟತೆ, ಅವಕಾಶವಾದಕ್ಕೆ ಮತ್ತೊಂದು ಹೆಸರೇ ಕುಮಾರಸ್ವಾಮಿ : ತೇಜಸ್ವಿನಿ ಗೌಡ ವಾಗ್ದಾಳಿ

ದಾವಣಗೆರೆ : ಮುಖ್ಯಮಂತ್ರಿ ಕುಮಾರಸ್ವಾಮಿ ಕುಮಾರಸ್ವಾಮಿ ವಿರುದ್ದ ವಿಧಾನ ಪರಿಷತ್ ಸದಸ್ಯೆ ತೇಜಸ್ವನಿ ಗೌಡ ವಾಗ್ದಾಳಿ ನಡೆಸಿದ್ದಾರೆ. ‘ ಕುಮಾರಸ್ವಾಮಿ ಎಂದರೆ ವಚನಭ್ರಷ್ಟತೆ ಅವಕಾಶ ವಾದಿಗೆ ಮತ್ತೊಂದು ಹೆಸರು, 24 ಗಂಟೆಯೊಳಗೆ ಸಾಲ ಮನ್ನಾ ಮಾಡುತ್ತೆನೆ ಎಂದು ಹೇಳಿದ ಕುಮಾರಸ್ವಾಮಿ ಈಗ ಏನು ಮಾಡುತ್ತಿದ್ದಾರೆ ‘ ಎಂದು ಕೇಳಿದ್ದಾರೆ.

‘ ಕುಮಾರಸ್ವಾಮಿಗೆ ಕುರ್ಚಿ ಮುಖ್ಯ ಕುರ್ಚಿಗೋಸ್ಕರ ಏನು ಬೇಕಾದ್ರು ಮಾಡುತ್ತಾರೆ. ರಾಜ್ಯದ ರೈತರು ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ ಆದರೆ ಸರ್ಕಾರಕ್ಕೆ ಅದರ ಪರಿವೇ ಇಲ್ಲ. ಸರ್ಕಾರ ಇನ್ನು ಟೇಕ್ ಆಪ್ ಆಗಿಲ್ಲ , ಯಾವಾಗ ಬೇಕಾದರು ಬಿದ್ದುಹೋಗಬಹುದು ಕುಮಾರಸ್ಚಾಮಿಯವರ ಮುಖವಾಡ ಕಳಚುವ ಕೆಲಸವನ್ನು ರಾಜ್ಯದ ಜನರು ಶೀಘ್ರ ಮಾಡುತ್ತಾರೆ ‘ ಎಂದಿದ್ದಾರೆ.

‘ ರಾಜ್ಯದ ಜನರಿಗೆ ಅನಿಶ್ಚಿತತೆ ಕಾಡುತ್ತಿದೆ . ಗಟ್ಟಿ ಸರ್ಕಾರ ಕೊಟ್ಟಂತಹ ಹೆಗ್ಗಳಿಕೆ ನಮ್ಮ ರಾಜ್ಯಕ್ಕಿದೆ. ಆದರೆ ಈ ಬಾರಿ ರಾಜ್ಯದ ಜನರಿಗೆ ದೌರ್ಭಾಗ್ಯ. ನನ್ನ ರಾಜಕೀಯ ಜೀವನದ ಎರಡನೆ ಇನ್ನಿಂಗ್ಸ್ ಆರಂಭಿಸುತ್ತಿದ್ದೇನೆ. ಅದಕ್ಕೆ ಎಲ್ಲಾ ಮಠಾಧೀಶರ ಆರ್ಶೀವಾದ ಪಡೆಯುತ್ತಿದ್ದೇನೆ ‘ ಎಂದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಕಾಗಿನೆಲೆ ಗುರುಪೀಠದಲ್ಲಿ ಹೇಳಿಕೆ ನೀಡಿದ್ದಾರೆ.

2 thoughts on “ವಚನ ಭ್ರಷ್ಟತೆ, ಅವಕಾಶವಾದಕ್ಕೆ ಮತ್ತೊಂದು ಹೆಸರೇ ಕುಮಾರಸ್ವಾಮಿ : ತೇಜಸ್ವಿನಿ ಗೌಡ ವಾಗ್ದಾಳಿ

 • July 2, 2018 at 9:18 AM
  Permalink

  ಕುಮಾರಣ್ಣನ ಬಗ್ಗೆ ಮಾತಾಡೋಕೆ ನಿನಗೆ ಯೋಗ್ಯತೆ ಇಲ್ಲ ಬಿಡು ತೇಜಸ್ವಿನಿ

  Reply
 • July 2, 2018 at 9:18 AM
  Permalink

  ಕುಮಾರಣ್ಣನ ಬಗ್ಗೆ ಮಾತಾಡೋಕೆ ನಿನಗೆ ಯೋಗ್ಯತೆ ಇಲ್ಲ ಬಿಡು ತೇಜಸ್ವಿನಿ

  Reply

Leave a Reply

Your email address will not be published.

Social Media Auto Publish Powered By : XYZScripts.com