ರಾಮನಗರ : ಮೊಬೈಲ್ ನಂಬರ್ ಕೇಳುವ ನೆಪದಲ್ಲಿ ಮನೆಗೆ ಹೋಗಿ ಗೃಹಿಣಿಯ ಗ್ಯಾಂಗ್ ರೇಪ್..!

ರಾಮನಗರ : ಇತ್ತೀಚಿನ ದಿನಗಳಲ್ಲಿ ಕಾಮುಕರ ಅಟ್ಟಹಾಸ ಹೆಚ್ಚುತ್ತಲೆ ಇದೆ. ತಮ್ಮ ಕಾಮದ ತೃಷೆಯನ್ನ ತೀರಿಸಿಕೊಳ್ಳಲು ಕಂಡ ಕಂಡ ಹೆಣ್ಣು
ಮಕ್ಕಳ ಮೇಲೆ ಆತ್ಯಾಚಾರವೆಸಗುತ್ತಿದ್ದಾರೆ. ನೆನ್ನೆ ರಾತ್ರಿ ಸಹಾ ಮೂವರು ಕಾಮುಕರು ತಮ್ಮ ಸ್ನೇಹಿತನ ಹೆಂಡತಿಯ ಮೇಲೆ ಕೌರ್ಯ ಮೆರೆದಿದ್ದಾರೆ.
ಮೊಬೈಲ್ ನಂಬರ್ ಕೇಳುವ ನೆಪದಲ್ಲಿ ಮನೆಗೆ ಹೋಗಿ ಗೃಹಣಿಯ ಮೇಲೆ ಮನಬಂದಂತೆ ಥಳಿಸಿ, ಗ್ಯಾಂಗ್ ರೇಪ್ ಮಾಡಿದ್ದಾರೆ.

Image result for gang rape

ಹೌದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಕಾಮುಕರು, ತನ್ನ ಸ್ನೇಹಿತ ಮನೆಯಲ್ಲಿ
ಆತ ಇಲ್ಲದಿರುವುದನ್ನ ತಿಳಿದುಕೊಂಡು, ಆತನ ಮನೆಗೆ ಮೊಬೈಲ್ ನಂಬರ್ ಕೇಳುವ ನೆಪದಲ್ಲಿ ಬರ್ತಡೆ ಪಾರ್ಟಿ ಮುಗಿಸಿ, ಕಂಠಪೂರ್ತಿ ಕುಡಿದುಕೊಂಡು
ಹೋಗಿ ಮನೆಯಲ್ಲಿದ್ದ ಗೃಹಣಿಯ ಮೇಲೆ ಕೌರ್ಯ ಮೆರದಿದ್ದಾರೆ. ಗೃಹಣಿ ಮನೆಯ ಬಾಗಿಲು ತೆಗೆದ ತಕ್ಷಣ ಒಳನುಗ್ಗಿದ ಕಾಮುಕರು, ಆಕೆಯ ಆರು ವರ್ಷದ
ಮಗುವಿನ ಮುಂದೆಯೇ ಗೃಹಣಿಯನ್ನ ಮನಬಂದಂತೆ ಹಲ್ಲೆ ನಡೆಸಿ, ಆನಂತರ ಮನೆಯಿಂದ ಬಲವಂತವಾಗಿ ಕರೆದುಕೊಂಡು ಬಂದು ಐದು ಗಂಟೆಗಳ
ಕಾಲ ಮೂವರು ಆತ್ಯಾಚಾರ ನಡೆಸಿದ್ದಾರೆ. ಆತ್ಯಾಚಾರ ನಡೆಸಿ ಗೃಹಣಿಯನ್ನ ಮನೆಯ ಸಮೀಪವೇ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಬೆಳಗ್ಗೆ ಆರು
ಗಂಟೆ ಸುಮಾರಿಗೆ ಗೃಹಣಿಗೆ ಪ್ರಜ್ಷೆ ಬಂದ ನಂತರ ಸಂಬಂಧಿಕರಿಗೆ ಕರೆ ಮಾಡಿ ನಡೆದ ಘಟನೆಯನ್ನ ತಿಳಿಸಿದ್ದಾರೆ. ಆ ನಂತರ ಅಸ್ವಸ್ಥಗೊಂಡ ಗೃಹಣಿಯನ್ನ
ಸಂಬಂಧಿಕರು ಮಾಗಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇನ್ನೂ ಗೃಹಣಿಯ ಪತಿ ಆಟೋಚಾಲಕನಾಗಿದ್ದು, ಹೆಂಡತಿ ಜೊತೆಗೆ ಜಗಳವಾಡಿಕೊಂಡು ಎರಡು ತಿಂಗಳಿಂದ ಮನೆಗೆ ಬರುತ್ತಿಲಿಲ್ಲ. ಗ್ರಾಮದ
ಹೊರಭಾಗದಲ್ಲಿ ತೋಟದ ಮನೆಯಲ್ಲಿ ಸಂತ್ರಸ್ಥ ಗೃಹಣಿ ತನ್ನ ಆರು ವರ್ಷದ ಮಗನ ಜೊತೆಯಲ್ಲಿ ಇದ್ದಳು. ಈ ಬಗ್ಗೆ ತಿಳಿದುಕೊಂಡಿದ್ದ ಗೃಹಣಿಯ ಪತಿಯ ಸ್ನೇಹಿತರಾದ ಪುರುಷೋತ್ತಮ್, ಮಂಜು, ಗಂಗರಾಜು(ಕುರುಡ) ಎಂಬುವವರಿಂದ ನೆನ್ನೆ ರಾತ್ರಿ ಗ್ಯಾಂಗ್ ರೇಪ್ ನಡೆಸಿ, ಮೂವರು ತಲೆ ಮರೆಸಿಕೊಂಡಿದ್ದಾರೆ.
ಇನ್ನೂ ಘಟನೆ ನಂತರ ತಾಲೂಕು ಆಸ್ಪತ್ರೆಗೆ ರಾಮನಗರ ಎಸ್ಪಿ ಬಿ.ರಮೇಶ್, ಮಾಗಡಿ ವಿಭಾಗದ ಡಿವೈಎಸ್ಪಿ ಪುರಷೋತ್ತಮ್, ಸರ್ಕಲ್ ಇನ್ಸ್ ಪೆಕ್ಟರ್
ಶಬರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಹೆಚ್ಚಿನ ಚಿಕಿತ್ಸೆ ಸಂತ್ರಸ್ಥ ಮಹಿಳೆಯನ್ನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನೂ ಆತ್ಯಾಚಾರವೆಸಗಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನ ಕೂಡ ನೇಮಿಸಲಾಗಿದೆ. ಒಟ್ಟಾರೆ ತಮ್ಮ ಕಾಮದ
ತೃಷೆಯನ್ನ ತೀರಿಸಿಕೊಳ್ಳಲು ಆ ಮೂವರು ಕಾಮುಕರು ತಮ್ಮ ಸ್ನೇಹಿತನ ಹೆಂಡತಿಯನ್ನೇ ಹಲ್ಲೆ ನಡೆಸಿ ಕ್ರೂರವಾಗಿ ಆತ್ಯಾಚಾರ ನಡೆಸಿದ್ದಾರೆ. ಈ ಸಂಬಂಧ
ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published.