ನಾನೂ ಕುರುಬ ಸಮುದಾಯದವನೇ, ನನಗೆ ಅನ್ಯಾಯವಾದಾಗ ಶ್ರೀಗಳು ಎಲ್ಲಿದ್ದರು.? : ಎಚ್. ವಿಶ್ವನಾಥ್

‘ ನನಗೆ ಅನ್ಯಾಯವಾದಾಗ ಕನಕಪೀಠದ ಸ್ವಾಮೀಗಳು ಎಲ್ಲಿ ಹೋಗಿದ್ದರು. ಕುರುಬ ಸಂಘಟನೆಗಳು ಎಲ್ಲಿ ಹೋಗಿದ್ದವು’ ಎಂದು ಮೈಸೂರಿನಲ್ಲಿ ಮಾಜಿ ಸಂಸದ, ಶಾಸಕ ಹೆಚ್.ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ. ‘ ಸಿದ್ದರಾಮಯ್ಯರಿಗೆ ಏನಾದರೂ ಆದರೆ ಸುಮ್ಮನಿರಲ್ಲ ‘ ಎಂಬ ಕಾಗಿನೆಲೆ ಶ್ರೀಗಳ ಹೇಳಿಕೆಗೆ ಶಾಸಕ ಹೆಚ್.ವಿಶ್ವನಾಥ್ ಗರಂ ಆಗಿದ್ದಾರೆ.

‘ನಾನು ಯಾರು ? ನಾನು ಕುರುಬ ಸಮುದಾಯದವನೇ. ನನಗೆ ತೊಂದರೆ ಕೊಟ್ಟವರು ಯಾರು? ವಿನಾಕಾರಣ ಕೊಡಬಾರದ ತೊಂದರೆ ಕೊಟ್ಟಾಗ ಇವರೆಲ್ಲಾ ಎಲ್ಲಿ ಹೋಗಿದ್ದರು. ಪಕ್ಷಕ್ಕೆ ಕರೆ ತಂದವರನ್ನು ಮೂಲೆಗುಂಪು ಮಾಡಿದರು. ಸಿದ್ದರಾಮಯ್ಯ ನಾಲ್ಕು ವರ್ಷ ಕುರುಬ ಸಮುದಾಯದವರನ್ನು ಮಂತ್ರಿ ಮಾಡಲಿಲ್ಲ.
ಆ ಸಮಯದಲ್ಲಿ ಶ್ರೀಗಳು ಏಕೆ ಕೇಳಲಿಲ್ಲ ? ಇಡಿ ಕುರುಬ ಸಂಘಟನೆ ಹಾಗೂ ಸ್ವಾಮೀಜಿ ಸಿದ್ದರಾಮಯ್ಯ ಒಬ್ಬರಿಗೆ ಮಾತ್ರವಾ ? ನಿಮ್ಮನ್ನು ಸ್ವಾಮಿ ಮಾಡಿದವರು ಯಾರು ? 6 ಕಡೆ ಮಠ ಕಟ್ಟಿದವರು ಯಾರು ? ಕಾಗಿನೆಲೆ ಶ್ರೀಗಳಿಗೆ ಹೆಚ್. ವಿಶ್ವನಾಥ್ ಪ್ರಶ್ನೆ‌ ಮಾಡಿದ್ದಾರೆ.

‘ ಸಿದ್ದರಾಮಯ್ಯ ಯಾವಾಗಲೂ ಮಠದ ವಿರೋಧಿ. ನಮ್ಮ ಮಠಕ್ಕೂ ವಿರೋಧ ವ್ಯಕ್ತಪಡಿಸಿದ್ದರು. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಎಲ್ಲಾ ಸ್ವಾಮೀಜಿಗಳ ಮಾತು ಕೇಳಿದ್ದೇನೆ‌ ‘ ಎಂದಿದ್ದಾರೆ.

ಮಾತೆ ಮಹಾದೇವಿ, ನಂಜವಧೂತ ಹಾಗೂ ಕಾಗಿನೆಲೆ ಶ್ರೀಗಳ ರಾಜಕೀಯ ಮಾತು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ‘ರಾಜಕಾರಣಿಗಳ ಪರ ಮಾತನಾಡುವುದು ವಾದ ಮಂಡನೆ ಹಾಗೂ ಸಮರ್ಥನೆ ಲಾಬಿ ಸರಿಯಲ್ಲ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಸ್ವಾಮೀಜಿಗಳು ಸಮಾಜದ ಅನಿಷ್ಠದ ಬಗ್ಗೆ ಮಾತನಾಡಲಿ. ರೈತರ ಬಗೆ ಮಾತನಾಡಲಿ. ಬಡವರ ಬಗ್ಗೆ ಮಾತನಾಡಲಿ. ರಾಜಕಾರಣಿಗಳು ಆಡಳಿತಶಾಹಿಗಳ ಪರವಾಗಿ, ರಾಜಕೀಯ ಮಾತನಾಡುವದು ಸರಿಯಲ್ಲ.

‘ ಸಿದ್ದರಾಮಯ್ಯ ಸಿಎಂ ಆಗಿ 5 ವರ್ಷ ಒಳ್ಳೆ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಸೋಲಿಗೆ ಅವರ ನಡವಳಿಕೆಯೇ ಕಾರಣ ‘ ಎಂದು ಮೈಸೂರಿನಲ್ಲಿ ಶಾಸಕ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com