FIFA 2018 : ಪೋರ್ಚುಗಲ್ vs ಉರುಗ್ವೆ ನಾಕೌಟ್ ಪಂದ್ಯ : ರೊನಾಲ್ಡೊ – ಸ್ವಾರೆಜ್ ಮುಖಾಮುಖಿ

ಫಿಶ್ತ್ ಕ್ರೀಡಾಂಗಣದಲ್ಲಿ ಶನಿವಾರ ಪೋರ್ಚುಗಲ್ ಹಾಗೂ ಉರುಗ್ವೆ ತಂಡಗಳ ನಡುವೆ ಅಂತಿಮ-16ರ ಸುತ್ತಿನ ಪಂದ್ಯ ನಡೆಯಲಿದೆ. ಮಹತ್ವದ ನಾಕೌಟ್ ಪಂದ್ಯದಲ್ಲಿ ಗೆದ್ದ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದ್ದು, ಸೋಲುವ ತಂಡ ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದೆ. ಪಂದ್ಯ ಭಾರತೀಯ ಕಾಲಮಾನದಂತೆ ರಾತ್ರಿ 11.30ಕ್ಕೆ ಪ್ರಾರಂಭವಾಗಲಿದೆ.

Image result for uruguay portugal fifa 2018

ಲೀಗ್ ಹಂತದಲ್ಲಿ ಮೂರೂ ಪಂದ್ಯಗಳನ್ನು ಗೆದ್ದು ‘ಎ’ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಪ್ರೀ ಕ್ವಾರ್ಟರ್ ಹಂತವನ್ನು ಪ್ರವೇಶಿಸಿರುವ ಉರುಗ್ವೆ ವಿಶ್ವಾಸದಲ್ಲಿದೆ. ಪೋರ್ಚುಗಲ್ ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದು ಪ್ರೀ ಕ್ವಾರ್ಟರ್ ಹಂತಕ್ಕೆ ಅರ್ಹತೆ ಪಡೆದಿದೆ. ಬಲಿಷ್ಠ ತಂಡಗಳ ನಡುವಿನ ಸೆಣಸಾಟ ಫುಟ್ಬಾಲ್ ಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ.

ಪೋರ್ಚುಗಲ್ ತಂಡದ ಪ್ರಮುಖ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಉರುಗ್ವೆಯ ಫಾರ್ವರ್ಡ್ ಪ್ಲೇಯರ್ ಲೂಯಿಸ್ ಸ್ವಾರೆಜ್ ಮೇಲೆ ಎಲ್ಲರ ಗಮನವಿದ್ದು, ಇಂದಿನ ಪಂದ್ಯ ಅವರಿಬ್ಬರ ನಡುವಿನ ಕದನ ಎಂದು ಬಿಂಬಿಸಲಾಗುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com