ಈಶ್ವರಪ್ಪ, ವಿಶ್ವನಾಥ್ ಗೆ ತೊಂದರೆಯಾದಗಲೂ ನಾನು ಹೋಗಿದ್ದೇನೆ : ಕಾಗಿನೆಲೆ ಶ್ರೀ

ದಾವಣಗೆರೆ : ಶಾಸಕ ವಿಶ್ವನಾಥ್ ಟಾಂಗ್ ಗೆ ಕಾಗಿನೆಲೆ ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ‘ ಮಠವನ್ನು ವಿಶ್ವನಾಥ್ ಕಟ್ಟಿಲ್ಲಾ ಎಂದು ಹೇಳಿಲ್ಲಾ. ವಿಶ್ವನಾಥ್ ನಮ್ಮ ಸಮಾಜದ ನಾಯಕರು. ನಮ್ಮನ್ನು ಟೀಕೆ ಮಾಡುವ ಜೊತೆಗೆ ಸಮಾಜವನ್ನು ಟೀಕೆ ಮಾಡಿದರೆ ಅವರಿಗೆ ಒಳ್ಳೆಯದಾಗುತ್ತೆ ಎಂದರೆ ನಾವು ಟೀಕೆ ಮಾಡಲು ಹೋಗೋಲ್ಲಾ ‘ ಎಂದಿದ್ದಾರೆ.

‘ ವಿಶ್ವನಾಥ್ ಬಗ್ಗೆ ಎಲ್ಲಿಯೂ ನಾವು ಟೀಕೆ ಮಾಡಿಲ್ಲಾ. ಮಠ ಕಟ್ಟುವಾಗು ಮರಿ ಸ್ವಾಮೀ ಬೇಕು ಎಂದು ಹೇಳುತ್ತಾರೆ. ಆಗ ನಮ್ಮ ತಂದೆ ದತ್ತು ಕೊಟ್ಟಿದ್ದು ಸಮಾಜವನ್ನು ಅಧ್ಯಯನ ಮಾಡಿದ ಮೇಲೆ ನಾಲ್ಕು ಸ್ವಾಮೀಗಳ ನೇಮಕ ಮಾಡಲಾಗಿತ್ತು. ವಿಶ್ವನಾಥ್ ಗೆ ನೋವಾದಾಗ ನಾವು ಅವರಿಗೆ ಸಮಾಧಾನ ಹೇಳಿದ್ದೇವು ‘ ಎಂದಿದ್ದಾರೆ.

Image result for kaginele swamiji

‘ ವಿಶ್ವನಾಥ್ ಕಾಂಗ್ರೇಸ್ ನಿಂದ ಕೈ ಬಿಡಬೇಡಿ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದೇವು. ವೈಯಕ್ತಿಯ ಪ್ರತಿಷ್ಠೆಯಿಂದ ಈ ರೀತಿ ಮಾತನಾಡಿದ್ರೆ ಏನ್ ಮಾಡೋದು. ಸಿದ್ದರಾಮಯ್ಯ ಕನ್ವಿನ್ಸ್ ಆದ್ರೂ, ಆದರೇ ವಿಶ್ವನಾಥ್ ಕೇಳಲಿಲ್ಲಾ ಅವರು ನಮ್ಮ ಮಾತು ಕೇಳಲಿಲ್ಲಾ’ ಎಂದಿದ್ದಾರೆ.

ರಾಜಕೀಯದಲ್ಲಿ ನಾನು ಮೂಗು ತೂರಿಸಿಲ್ಲಾ. ನನ್ನನ್ನ ಸಮಾಜವನ್ನು ಟೀಕೆ ಮಾಡಿದರೆ ಅವರಿಗೆ ಖುಷಿ ಯಾಗುತ್ತೇ ಎಂದರೆ ಸ್ವಾಗತಿಸುತ್ತೇನೆ. ವಿಶ್ವನಾಥ್ ಒಂದು ಕಾಲದಲ್ಲಿ ದೇವೇಗೌಡ ರನ್ನು ಘಟ ಸರ್ಪ ಎಂದಿದ್ದರೂ, ಸಿದ್ದರಾಮಯ್ಯ ಕಪ್ಪೆ ಎಂದಿದ್ದರು ಈಗ ಘಟಸರ್ಪ, ಕಾಳಿಗ ಸರ್ಪದಲ್ಲಿದ ಅಡಿ ನಿಂತಿದ್ದರೋ ಗೊತ್ತಿಲ್ಲಾ. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೋಡಿಯ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

‘ ವಿಶ್ವನಾಥ್ ನಮ್ಮ ಸಮಾಜದ ನಾಯಕರು. ಆನೆ ಕರೆಯಲ್ಲಿ ಸ್ನಾನ ಮಾಡುತ್ತೇ, ದಡಕ್ಕೆ ಬಂದ ಮಣ್ಣನ್ನು ತನ್ನ ತಲೆ ಮೇಲೆ ಹಾಕಿಕೊಳ್ಳುತ್ತೆ. ವಿಶ್ವನಾಥ್ ತಮ್ಮ ತಲೆ ಮೇಲೆ ಮಣ್ಣು ಹಾಕಿಕೊಂಡು ಸಮಾಜದ ಮೇಲೆ ಮಠದ ಮೇಲೆ ಹಾಕುವುದು ಸರಿಯಲ್ಲಾ ‘ ಎಂದಿದ್ದಾರೆ.

‘ ವಿಶ್ವನಾಥ್ ಸಮಾಜ ಕಟ್ಟೊದವರು ನೀವು ನಮ್ಮ ನಾಯಕರು ನಿಮಗೆ ಹೇಳುವಷ್ಟು ದೊಡ್ಡವರು ನಾವಲ್ಲಾ. ನನ್ನ ಸಮಾಜದ ಪರ‌ ಇದ್ದೇನೆ, ಹರಿಹರ ಬ್ರಹ್ಮ ಬಂದರೂ ನಾನು ದ್ವನಿ ಎತ್ತುವುದು ಬಿಡಲ್ಲ. ಈಶ್ವರಪ್ಪ, ವಿಶ್ವನಾಥ್ ಗೆ ತೊಂದರೆಯಾದಾಗ ನಾನು ಹೋಗಿದ್ದೇನೆ. ವಿಶ್ವನಾಥ್ ವಯಕ್ತಿಕ ಪ್ರತಿಷ್ಟೆಗಾಗಿ ಈ ರೀತಿ ಮಾಡುತ್ತಿದ್ದಾರೆ. ವಿಶ್ವನಾಥ್ ಕೆಲ ನಡವಳಿಕೆ ಸಿದ್ದರಾಮಯ್ಯ ರಿಗೆ ಬೇಸರ ತಂದಿದೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com