WATCH : ‘ಕಮಾನ್ ಹಾರ್ದಿಕ್’ : ಆಲ್ರೌಂಡರ್ ಪಾಂಡ್ಯಗೆ ಚಿಯರ್ ಮಾಡಿದ ಜೀವಾ ಧೋನಿ..!

ಡಬ್ಲಿನ್ ನಲ್ಲಿ ಶುಕ್ರವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಐರ್ಲೆಂಡ್ ವಿರುದ್ಧ 143 ರನ್ ಅಂತರದ ಭರ್ಜರಿ ಜಯಗಳಿಸಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ ಮಿಂಚಿದ್ದರು. 9 ಎಸೆತಗಳನ್ನು ಎದುರಿಸಿದ್ದ ಹಾರ್ದಿಕ್ 1 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಬಾರಿಸಿ 32 ರನ್ ಗಳಿಸಿದ್ದರು.

ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾ ‘ಕಮಾನ್ ಹಾರ್ದಿಕ್’ ಎಂದು ಚಿಯರ್ ಮಾಡಿ ಟೀಮ್ ಇಂಡಿಯಾ ಆಲ್ರೌಡರ್ ಹಾರ್ದಿಕ್ ಪಾಂಡ್ಯ ಅವರನ್ನು ಪ್ರೋತ್ಸಾಹಿಸಿದ್ದಾಳೆ. ಮುದ್ದಾದ ಜೀವಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com