FIFA 2018 : ಅರ್ಜೆಂಟೀನಾ – ಫ್ರಾನ್ಸ್ 16ರ ಸುತ್ತಿನ ಪಂದ್ಯ : ಮೆಸ್ಸಿ ಮೇಲೆ ನಿರೀಕ್ಷೆಯ ಭಾರ

ಶನಿವಾರ ಕಜಾನ್ ಅರೆನಾ ಮೈದಾನದಲ್ಲಿ ಅರ್ಜೆಂಟೀನಾ ಹಾಗೂ ಫ್ರಾನ್ಸ್ ತಂಡಗಳ ನಡುವೆ ಫಿಫಾ ವಿಶ್ವಕಪ್-2018 ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ಇದು ನಾಕ್ ಔಟ್ ಪಂದ್ಯವಾಗಿದ್ದು, ಗೆದ್ದ ತಂಡ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಲಿದ್ದು, ಸೋತ ಟೀಮ್ ಫಿಫಾ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಲಿದೆ. ಪಂದ್ಯ ಭಾರತೀಯ ಕಾಲಮಾನದಂತೆ ಸಾಯಂಕಾಲ 7.30ಕ್ಕೆ ಆರಂಭಗೊಳ್ಳಲಿದೆ.

ಅರ್ಜೆಂಟೀನಾದ ಪ್ರಮುಖ ಸ್ಟ್ರೈಕರ್ ಹಾಗೂ ನಾಯಕ ಲಯೋನೆಲ್ ಮೆಸ್ಸಿ ಅವರ ಮೇಲೆ ಸಹಜವಾಗಿಯೇ ಅಪಾರ ನಿರೀಕ್ಷೆಗಳ ಭಾರವಿದೆ. ಮೊದಲೆರಡು ಲೀಗ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನದಿಂದ ನಿರಾಸೆ ಮೂಡಿಸಿದ್ದ, ಅರ್ಜೆಂಟೀನಾ, ಕೊನೆಯ ಲೀಗ್ ಪಂದ್ಯದಲ್ಲಿ ಅರ್ಜೆಂಟೀನಾ ನೈಜೀರಿಯಾ ವಿರುದ್ಧ ಗೆದ್ದು ಅಂತಿಮ 16ರ ಸುತ್ತಿಗೆ ಅರ್ಹತೆ ಪಡೆದಿತ್ತು.

ಲೀಗ್ ಹಂತದ ಪಂದ್ಯಗಳಲ್ಲಿ ಫ್ರಾನ್ಸ್ 2ರಲ್ಲಿ ಗೆದ್ದು, ಒಂದನ್ನು ಡ್ರಾ ಮಾಡಿಕೊಂಡಿತ್ತು. ಫ್ರಾನ್ಸ್ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಪ್ರೀ ಕ್ವಾರ್ಟರ್ ಹಂತಕ್ಕೆ ಪ್ರವೇಶದ ಅರ್ಹತೆ ಪಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com