ಚಾಮರಾಜನಗರ : 3 ಲಕ್ಷ ರೂಪಾಯಿಗೆ ಗೂಬೆ ಮಾರಲು ಯತ್ನ : ಪೋಲೀಸರಿಂದ ವ್ಯಕ್ತಿಯ ಬಂಧನ

ಚಾಮರಾಜನಗರ : ಗೂಬೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧಿಸಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಕೋಡಹಳ್ಳಿ ಸರ್ಕಲ್ ಬಳಿ ನಡೆದಿದೆ. ಬೇರಂಬಾಡಿ ಗ್ರಾಮದ ಮಹೇಶ್ (20) ಬಂಧಿತ ಆರೋಪಿಯಾಗಿದ್ದಾನೆ. ಮತ್ತೋರ್ವ ಆರೋಪಿ ಮಹೇಶ್ ನಾಪತ್ತೆಯಾಗಿದ್ದಾನೆ.

ಕೇರಳ ಮೂಲದ ವ್ಯಕ್ತಿಗಳಿಗೆ 3 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಸರ್ಕಲ್ ಇನ್ಸ್ ಪೆಕ್ಟರ್ ಬಾಲಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಗೂಬೆಯನ್ನು ಚೀಲದಲ್ಲಿ ತುಂಬಿ ಅನುಮಾನಸ್ಪದವಾಗಿ ಸಕರ್ಲ್ ಬಳಿ ತಿರುಗಾಡುತ್ತಿದ್ದನ್ನು ಗಮನಿಸಿ ಬಂಧಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.