ಯಾದಗಿರಿ : ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕಿದ್ದಕ್ಕೆ ದಲಿತರ ಮೇಲೆ ಮೇಲ್ಜಾತಿಯವರಿಂದ ಹಲ್ಲೆ..

ಯಾದಗಿರಿ : ಹುಟ್ಟುಹಬ್ಬದ ಬ್ಯಾನರ್ ಹಾಕಿದಕ್ಕೆ ಮೇಲ್ಜಾತಿಯವರಿಂದ ದಲಿತರ ಮೇಲೆ ಹಲ್ಲೆ ನಡೆಸಲಾಗಿರುವ ಘಟನೆ ಯಾದಗಿರಿ ಜಿಲ್ಲೆ ಸುರುಪೂರ ತಾಲೂಕಿನ ಹಂದ್ರಾಳ (ಎಸ್ ಡಿ) ಗ್ರಾಮದಲ್ಲಿ ನಡೆದಿದೆ. ದಲಿತ‌ರ ಮನೆಗೆ ನುಗ್ಗಿ ಮೇಲ್ಜಾತಿಯವರು ದೇವರಾಜ( 23), ಚಂದ್ರಮ್ಮ (45) ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ.

ಗಂಗಣ್ಣ, ಶರಣಗೌಡ ಸೇರಿದಂತೆ ಆರು ಜನರಿಂದ ದಲಿತರ ಮೇಲೆ ಹಲ್ಲೆ ಮಾಡಿರುವ ಆರೋಪವಿದೆ. ಹಂದ್ರಾಳ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಸ್ಥಳದಲ್ಲಿ ಪೊಲೀಸ್ ಪಡೆ ಬೀಡು ಬಿಟ್ಟಿದೆ. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.‌‌

Leave a Reply

Your email address will not be published.

Social Media Auto Publish Powered By : XYZScripts.com