ಉಡುಪಿ : ಕುಸಿದು ಬಿದ್ದ ದೇವಸ್ಥಾನದ ಆವರಣದ ಗೋಡೆ : ಎಂ.ಕಾಮ್ ವಿದ್ಯಾರ್ಥಿನಿ ಸಾವು

ಬೈಂದೂರು ತಾಲೂಕಿನ ಉಳ್ಳೂರು ಶ್ರೀ ಜಟ್ಟಿಗೇಶ್ವರ ದೈವಸ್ಥಾನದ ಆವರಣ ಗೋಡೆ ಬಿದ್ದು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಿಗ್ಗೆ ಪ್ರತಿನಿತ್ಯ ಮನೆ ಹತ್ತಿರದ ದೈವಸ್ಥಾನಕ್ಕೆ ಬಂದು ಕೈಮುಗಿದುಕೊಂಡು ಹೋಗುವ ಅಭ್ಯಾಸವನ್ನು ಇಟ್ಟುಕೊಂಡಿದ್ದಾಳೆ. ಈಕೆ ಕೈ ಮುಗಿದು ಮನೆಗೆ ತೆರಳುವಾಗ ಭಾರಿ ಮಳೆಯಿಂದ ದೈವಸ್ಥಾನದ ಆವರಣದಲ್ಲಿ ನೀರು ತುಂಬಿಕೊಂಡಿದ್ದು, ಇದರಿಂದ ಆವರಣದ ಗೋಡೆ ಕುಸಿದು ಈಕೆಯ ಮೇಲೆ ಬಿದ್ದಿದೆ.

ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಹಾಗೂ ಬೈಂದೂರು ತಹಶೀಲ್ದಾರ ಪುರಂದರ ಹೆಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟ ವಿದ್ಯಾರ್ಥಿನಿಯ ಮೃತದೇಹವನ್ನು ಬೈಂದೂರು ಶವಗಾರದಲ್ಲಿ ಇರಿಸಲಾಗಿದೆ. ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com