ಹೊಲದಲ್ಲಿ ಕೆಲಸ ಮಾಡುತ್ತಿದವರ ಮೇಲೆ ಚಿರತೆ ದಾಳಿ : ಇಬ್ಬರಿಗೆ ಗಂಭೀರ ಗಾಯ

ದಾಳಿಗೊಳಗಾದ ಕರಿಯಣ್ಣ(55), ಶಿವಣ್ಣ (49) ಎಂಬುವವರ ಸ್ಥಿತಿ ಗಂಭೀರವಾಗಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಚಿರತೆ ದಾಳಿ ಮಾಡಿದೆ.  ಗಾಯಗೊಂಡವರನ್ನು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಹಿಂದೆ 100ಕ್ಕೂ ಹೆಚ್ಚು ಕುರಿಗಳನ್ನು ತಿಂದು ಹಾಕಿರುವ ಚಿರತೆ ಸುತ್ತಮುತ್ತಲಿನ ಜನರಲ್ಲಿ ಭೀತಿ ಮೂಡಿಸಿದೆ. ಇಂದು ಕೆಲಸಗಾರರ ಮೇಲೆ ದಾಳಿ ನಡೆಸಿದೆ.
ಚಿರತೆ ಸೆರೆ ಹಿಡಿದು ಕ್ರಮ ಕೈಗೊಳ್ಳದ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಧ  ಬಡವನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನ ಘಟನಾಸ್ಥಳಕ್ಕೆ  ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com