ಯೂಟ್ಯೂಬ್ ನಲ್ಲಿ ದಿ ವಿಲನ್ ಅಬ್ಬರ : ಟೀಸರ್ ರಿಲೀಸಾದ ಅರ್ಧ ಗಂಟೆಯಲ್ಲಿ ಲಕ್ಷ ಮಂದಿ ವೀಕ್ಷಣೆ

ಬೆಂಗಳೂರು : ಎಲ್ಲಾರೂ ಕಾದುನೋಡುತ್ತಿದ್ದ  ದಿ ವಿಲನ್ ಸಿನಿಮಾದ ಟೀಸರ್ ನೋಡಲು  ಕೊನೆಗೂ ಘಳಿಗೆ ಕೂಡಿ ಬಂತು. ನಟ ಶಿವರಾಜಕುಮಾರ ಹಾಗೂ ಕಿಚ್ಚ ಸುದೀಪ್ ನಟನೆಯ ದಿ ವಿಲನ್ ಸಿನಿಮಾದ ಟೀಸರ್  ಅದ್ದೂರಿಯಾಗಿ ಲಾಂಚ್ ಆಗಿದೆ.  ನೆನ್ನೆ ಮಾಗಡಿ ರಸ್ತೆಯಲ್ಲಿರುವ ಜಿ ಟಿ ಮಾಲ್ ನಲ್ಲಿ  ಸಿಎಂ ಕುಮಾರಸ್ವಾಮಿ ಟೀಸರ್ ಬಿಡುಗಡೆ ಮಾಡಿದ್ದರು.

the villain ಗೆ ಚಿತ್ರದ ಫಲಿತಾಂಶ

ಸಾಮಾಜಿಕ ಜಾಲ ತಾಣಗಳಲ್ಲಿ ‘ದಿ ವಿಲನ್’ ಟೀಸರ್ ಅಬ್ಬರ ಜೋರಾಗಿದೆ. ಯೂಟ್ಯೂಬ್ ನಲ್ಲಿ ಸಹ ರಿಲೀಸ್ ಆಗಿರುವ ‘ದಿ ವಿಲನ್’ ಟೀಸರ್ ಸಂಚಲನವನ್ನು ಸೃಷ್ಟಿಸಿದೆ. ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರ ಒಂದೊಂದು ಟೀಸರ್ ಬಿಡುಗಡೆಯಾಗಿದ್ದು, ಎರಡು ಟೀಸರ್ ಗಳನ್ನು ಜನ ನೋಡಿ ಇಷ್ಟಪಟ್ಟಿದ್ದಾರೆ.

ಇನ್ನ ಟೀಸರ್ ಬಿಡುಗಡೆಯಾಗಿ ಅರ್ಧ ಗಂಟೆಯಾಗಳಲ್ಲಿ ಒಂದು ಲಕ್ಷ ಮಂದಿ ವೀಕ್ಷಿಸಿದ್ದು, ಸುದೀಪ್ ಅವರ ಟೀಸರ್ ಅನ್ನು ಎಂಟು ಲಕ್ಷಕ್ಕೂ ಹೆಚ್ಚು ಜನ ನೋಡಿದ್ದು, ಶಿವರಾಜ್ ಕುಮಾರ್ ಅವರ ಟೀಸರ್ ಅನ್ನು ಆರು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಪ್ರಮುಖವಾಗಿ ಮೇಕಿಂಗ್ ಹಾಗೂ ಮ್ಯೂಸಿಕ್ ಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಸಿನಿಮಾಗೆ ಸಿ.ಆರ್. ಮನೋಹರ್ ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ಟೀಸರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಎರಡು ಟೀಸರ್ ಗಳು ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರ ಪಕ್ಕಾ ಅಭಿಮಾನಗಳಿಗೆ ಹೇಳಿ ಮಾಡಿಸಿದ್ದ ಆಗಿದೆ. ಸದ್ಯ ಸಿನಿಮಾದ ಎರಡು ಟೀಸರ್ ಗಳನ್ನು ಬಿಟ್ಟಿರುವ ನಿರ್ದೇಶಕ ಪ್ರೇಮ್ ನಂತರ ಆಡಿಯೋ ಲಾಂಚ್ ಮಾಡಲಿದ್ದಾರೆ. ಬಳಿಕ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಿನಿಮಾ ತೆರೆಗೆ ಬರಲಿದೆ.

ವಿಶೇಷವೆಂದರೆ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ಟೀಸರ್ ವೀಕ್ಷಣೆಗಾಗಿ 500 ರೂ ಪಡೆದ್ದು ಸಂಗ್ರಹಿಸಿದ ಹಣವನ್ನು ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಕನ್ನಡ ನಿರ್ದೇಶಕರಿಗೆ ಹಂಚಲಾಗಿದೆ. ಸಿಎಂ ಕುಮಾರಸ್ವಾಮಿಯವರು ನಿರ್ದೇಶಕರಾದ ಬೂದಾಳ್ ಕೃಷ್ಣಮೂರ್ತಿ, ಹಿರೇಮಠ್, ಆನಂದ್ ಪಿ ರಾಜು, ಎ ಟಿ ರಘು ಅವರಗೆ ಸಂಗ್ರಹಿಸಿದ್ದ ಹಣವನ್ನು ಹಂಚಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com