ಮೋದಿ ವಿರುದ್ಧ ಯುದ್ಧ ಮಾಡಿದ್ದಕ್ಕೇ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಸೋಲು : ಜಿಟಿಡಿ

ಬೆಳಗಾವಿ : ‘ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ಯುದ್ದ ಮಾಡಲು ಹೋಗಿ‌ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲನುಭವಿಸಬೇಕಾಯಿತು ‘ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ. ಬೆಳಗಾವಿಯ ವಿಟಿಯು ಆವರಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿದ್ದರಾಮಯ್ಯರನ್ನು‌ ನಾನು ಸೋಲಿಸಿಲ್ಲ. ಅವರೇ ಮೋದಿ ವಿರುದ್ಧ ಸೆಣಸಾಡಲು ಹೋಗಿ ಸೋಲನುಭವಿಸಿದರು. ಜಿಟಿ ದೇವೆಗೌಡ ಅವರನ್ನು ಸೋಲಿಸಿಲ್ಲ ‘ ಎಂದರು.

‘ ರೈತರ ಸಾಲ ಮನ್ನಾ ಹಾಗೂ ನೂತನ ಸರ್ಕಾರದ ಬಜೆಟ್ ಮಂಡನೆಗೆ ಸಿದ್ದರಾಮಯ್ಯನವರ ವಿರೋಧವಿಲ್ಲ.‌ ಮಾಧ್ಯಮಗಳಲ್ಲಿ ‌ಮಾತ್ರ ಆ ರೀತಿ ಬರುತ್ತಿದೆ. ಬಜೆಟ್ ನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಮೂಲ ಸೌಕರ್ಯ, ಖಾಲಿ ಹುದ್ದೆಗಳ ನೇಮಕ ಸಂಬಂಧ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದೇನೆ. ನನ್ನ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ‘ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com