ಜುಲೈ 5ಕ್ಕೆ ಬಜೆಟ್ ಮಂಡನೆ ಇದಕ್ಕೆ ಯಾವುದೇ ವಿರೋಧವಿಲ್ಲ : ಸಚಿವ ವೆಂಕಟರಾವ್ ನಾಡಗೌಡ

ಹುಬ್ಬಳ್ಳಿ : ಜುಲೈ 5ರಂದು ಬಜೆಟ್ ಮಂಡನೆಯಾಗಲಿದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವೆಂಕಟರಾವ್ ನಾಡಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಲಹೆ ನೀಡಿದ್ದಾರೆ. ಬಹಿರಂಗವಾಗಿ ಬಜೆಟ್ ಮಂಡನೆ ಮಾಡುವುದು ಬೇಡ ಎಂದು ಎಲ್ಲಿಯೂ ಹೇಳಿಲ್ಲ. ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬುದು ಸುಳ್ಳು. ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಇರುತ್ತೆ.  ಈ ಸರ್ಕಾರವನ್ನ ದೇವರೇ ರಚನೆ ಮಾಡಿದ್ದಾನೆ, ಆ ದೇವರೇ ಐದು ವರ್ಷ ನಡೆಸುತ್ತಾನೆ ಎಂದು ತಿಳಿಸಿದ್ದರು.

ಸಂಬಂಧಿತ ಚಿತ್ರ

ನನ್ನ ಇಲಾಖೆಯಲ್ಲಿ ಪಶು ವೈದ್ಯರುಗಳ ಕೊರತೆ ಇದೆ.  500 ಪಶು ವೈದ್ಯರ ನೇಮಕಾತಿ ಪ್ರಕ್ರಿಯೆಯೂ ನಡೆದಿದೆ. ಬಜೆಟ್ ನಲ್ಲಿ ಪಶು ಸಂಗೋಪನಾ ಇಲಾಖೆಗೆ 2500 ಕೋಟಿ ರೂ. ಹಣವನ್ನು ಮೀಸಲು ಇಡಬೇಕೆಂದು ಕೇಳಿಕೊಂಡಿದ್ದೇವೆ. ಅಷ್ಟೇ ಅಲ್ಲದೇ ಇಸ್ರೇಲ್ ತಂತ್ರಜ್ಞಾನವನ್ನು ಹೈನುಗಾರಿಕೆಯಲ್ಲಿ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com