FIFA 2018 : ಬೆಲ್ಜಿಯಂಗೆ ಶರಣಾದ ಇಂಗ್ಲೆಂಡ್ : ಪ್ರೀ ಕ್ವಾರ್ಟರ್ ಹಂತಕ್ಕೆ ಜಪಾನ್, ಕೊಲಂಬಿಯಾ

ಸಮರ ಅರೆನಾದಲ್ಲಿ ಗುರುವಾರ ನಡೆದ ‘ಎಚ್’ ಗುಂಪಿನ ಲೀಗ್ ಪಂದ್ಯದಲ್ಲಿ ಸೆನೆಗಲ್ ವಿರುದ್ಧ ಕೊಲಂಬಿಯಾ 1-0 ಅಂತರದ ಜಯಗಳಿಸಿದೆ. ಕೊಲಂಬಿಯಾ ಪರವಾಗಿ ಎರ್ರಿ ಮಿನಾ 74ನೇ ನಿಮಿಷದಲ್ಲಿ ಗೋಲ್ ದಾಖಲಿಸಿದರು. ಜಪಾನ್ ಹಾಗೂ ಕೊಲಂಬಿಯಾ ತಂಡಗಳು ಪ್ರೀ ಕ್ವಾರ್ಟರ್ ಹಂತವನ್ನು ಪ್ರವೇಶಿಸಿವೆ.

ವೊಲ್ಗೊಗ್ರಾಡ್ ಅರೆನಾದಲ್ಲಿ ನಡೆದ ‘ಎಚ್’ ಗುಂಪಿನ ಲೀಗ್ ಪಂದ್ಯದಲ್ಲಿ ಜಪಾನ್ ವಿರುದ್ಧ ಪೊಲ್ಯಾಂಡ್ 0-1 ಅಂತರದಿಂದ ಜಯ ಸಾಧಿಸಿದೆ. ಪೊಲ್ಯಾಂಡ್ ಪರವಾಗಿ ಜಾನ್ ಬೆಡ್ನರೆಕ್ 59ನೇ ನಿಮಿಷದಲ್ಲಿ ಗೋಲ್ ಬಾರಿಸಿದರು.

ಕ್ಯಾಲಿನಿಂಗ್ರಾಡ್ ಕ್ರೀಡಾಂಗಣದಲ್ಲಿ ನಡೆದ ‘ಜಿ’ ಗುಂಪಿನ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬೆಲ್ಜಿಯಂ 0-1 ಗೋಲ್ ಅಂತರದ ಗೆಲುವು ಸಾಧಿಸಿದೆ. ಬೆಲ್ಜಿಯಂ ಪರವಾಗಿ ಅದ್ನಾನ್ ಜಾನುಜಾಜ್ 51ನೇ ನಿಮಿಷದಲ್ಲಿ ಗೋಲ್ ಗಳಿಸಿದರು.

ಮರ್ಡೊವಿಯಾ ಅರೆನಾದಲ್ಲಿ ನಡೆದ ‘ಜಿ’ ಗುಂಪಿನ ಲೀಗ್ ಪಂದ್ಯದಲ್ಲಿ ಪನಾಮಾ ವಿರುದ್ಧ ಟ್ಯುನಿಶಿಯಾ 1-2 ಅಂತರದ ಜಯ ಸಾಧಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com