ಕಲಬುರಗಿಯಲ್ಲಿ ಕಾರಹುಣ್ಣಿಮೆ ಸಂಭ್ರಮ : ಶಾಸಕನ ಕಾಲಿನ ಮೇಲೆ ಹಾಯ್ದ ಎತ್ತಿನ ಬಂಡಿ

ಕಲಬುರಗಿ : ಕಾರಹುಣ್ಣಿಮೆ ಸಂಭ್ರಮಾಚರಣೆ ವೇಳೆ ವೇಗವಾಗಿ ಬಂದ ಬಂಡಿ ಶಾಸಕ ಡಾ.ಉಮೇಶ್ ಜಾಧವ್  ಕಾಲಿನ ಮೇಲೆ ಹಾಯ್ದ ಪರಿಣಾಮ ಶಾಸಕರು ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.
ಚಿಂಚೋಳಿ ಶಾಸಕರಾಗಿರುವ ಉಮೇಶ್ ಜಾಧವ್, ಚಿಂಚೋಳಿ ಪಟ್ಟಣದಲ್ಲಿ ನಡೆದ ಕಾರ ಹುಣ್ಣಿಮೆ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮೊದಲು ಪೂಜೆ ಸಲ್ಲಿಸಿ  ಚಕ್ಕಡಿ ಓಡಿಸಿ ಸಂಭ್ರಮಿಸಿದ ಜಾಧವ್, ನಂತರ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದರು, ಈ ವೇಳೆ ವೇಗವಾಗಿ ಬಂದ ಎತ್ತಿನ ಬಂಡಿ ನಿಂತಿದ್ದ ಗುಂಪಿನ ಮೇಲೆ ನುಗ್ಗಿದೆ.
ಈ ವೇಳೆ ಉಮೇಶ್ ಜಾಧವ್ ಅವರ ಮೇಲೆ ಬಂಡಿ ಹಾಯ್ದಿದ್ದು, ಬಲಗಾಲು ಮತ್ತು ಭುಜಕ್ಕೆ ಗಾಯಗಳಾಗಿವೆ. ಸ್ವಲ್ಪದರಲ್ಲಿಯೇ ಜಾಧವ್ ಅವರು ಭಾರಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇನ್ನೂ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಾಧವ್ ಅವರನ್ನು ಹೈದರಾಬಾಗೆ ಕರೆದೊಯ್ಯಲಾಗಿದೆ. ಈ ಘಟನೆಗೆ ಸಂಬಂಧ  ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com