ನಾಡೋಜ ಚನ್ನವೀರ ಕಣವಿ 91ನೇ ಹುಟ್ಟುಹಬ್ಬ : ಚೆಂಬೆಳಕಿನ ಕವಿಗೆ ಶುಭಕೋರಿದ ಜಿಲ್ಲಾಧಿಕಾರಿ

ಕನ್ನಡದ ಖ್ಯಾತ ಕವಿ, ಹಿರಿಯ ಸಾಹಿತಿ ನಾಡೋಜ ಚನ್ನವೀರ ಕಣವಿಯವರು ಶುಕ್ರವಾರ 91ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚೆಂಬೆಳಕಿನ ಕವಿ ,ನಾಡೋಜ ಚನ್ನವೀರ ಕಣವಿ ಅವರ ಮನೆಗೆ ತೆರಳಿ ಧಾರವಾಡದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಶುಭ ಕೋರಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿಯವರ ಜೊತೆಗೆ AC ಮಹಮದ್ ಜುಬೇರ್, ಪ್ರೊಬೆಷನರಿ ಎಸಿ ಶೇಖರ್ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ರಂಗಣ್ಣವರ ಮತ್ತಿತರರು ಇದ್ದರು.

Leave a Reply

Your email address will not be published.

Social Media Auto Publish Powered By : XYZScripts.com