ವರಮಹಾಲಕ್ಷ್ಮಿ ಹಬ್ಬಕ್ಕೆ ಮೈತ್ರಿ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್ :ಏನದು ಸಿಹಿ ಸುದ್ದಿ !

ಮೈಸೂರು  : ಮೈತ್ರಿ ಸರ್ಕಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗಾಗಿ ಬಂಪರ್ ಆಫರ್ ನೀಡಿದ್ದಾರೆ. ಈ ಬಾರಿ ವರಮಹಾಲಕ್ಷ್ಮೀ ಹಬ್ಬಕ್ಕೆ ಉಡುಗೊರೆಯಾಗಿ ಮೈಸೂರು ಸಿಲ್ಕ್ ಸ್ಯಾರಿಯನ್ನ ಕೇವಲ 4,500 ರೂಪಾಯಿಗಳಿಗೆ ನೀಡುವುದಾಗಿ ರೇಷ್ಮೆ ಸಚಿವ ಸಾ.ರಾ ಮಹೇಶ್ ಘೋಷಣೆ ಮಾಡಿದ್ದಾರೆ.

ಮೈಸೂರಿನ ಪತ್ರಕರ್ತರ ಸಂಘದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ , ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕೇವಲ 4,500ರೂ ಗೆ ಮೈಸೂರು ಸಿಲ್ಕ್ ಸೀರೆ ಕೊಡುಗೆಯಾಗಿ ನೀಡಲಾಗುತ್ತದೆ. ಮೈಸೂರು ಸಿಲ್ಕ್ ನ ಸರ್ಕಾರಿ ಸ್ಟಾಲ್ ಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಬೇಡಿಕೆ ತಕ್ಕಂತೆ ರೇಷ್ಮೆ ಸೀರೆಗಳನ್ನು ತಯಾರಿಸಲಾಗುತ್ತದೆ. ಎಷ್ಟು ಬೇಡಿಕೆ ಇದೆ ಅಷ್ಟು ಸೀರೆ ಗಳನ್ನ ಪೂರೈಕೆ ಮಾಡಲಾಗ್ತದೆ ಎಂದು ತಿಳಿಸಿದ್ದಾರೆ.

ಸಂಬಂಧಿತ ಚಿತ್ರ

ಮೈಸೂರು ಭಾಗದ ರೇಷ್ಮೆ ಬೆಳೆಗಾರರ ಅನುಕೂಲಕ್ಕೆ ಹೊಸ ಮಾರುಕಟ್ಟೆ ಆರಂಭ ಮಾಡುತ್ತೇವೆ. ರಾಮನಗರದ ಮಾದರಿಯಲ್ಲಿ ಕೊಳ್ಳೆಗಾಲದಲ್ಲಿಯೂ ರೇಷ್ಮೆ ಮಾರಾಟ ಕೇಂದ್ರ ತೆರೆಯಲಾಗುತ್ತದೆ. ಮೈಸೂರು ಸಿಲ್ಕ್ ಅನ್ನ ಕೆಲವರು ನಕಲಿ ಮಾಡಿ ಮಾರಾಟ ಮಾಡ್ತಿದ್ದಾರೆ.

only sarees ಗೆ ಚಿತ್ರದ ಫಲಿತಾಂಶ

ಇದನ್ನ ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿ ಮೂಲಕ ನಿರುದ್ಯೋಗ ನಿವಾರಣೆಗೂ ಒತ್ತು ಕೊಡುತ್ತೇವೆ ಎಂದು ಸಚಿವ ಸಾರಾ ಮಹೇಶ್ ತಿಳಿಸಿದರು.ಮೈಸೂರು ಸಿಲ್ಕ್ ಹೆಸರಿನಲ್ಲಿ ಬೇರೆ ಅಂಗಡಿಯವರು ಸುಳ್ಳು ಹೇಳಿ ಮಾರಾಟ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 

Leave a Reply

Your email address will not be published.

Social Media Auto Publish Powered By : XYZScripts.com