ಹುಟ್ಟು ಹಬ್ಬದ ಸಂಭ್ರಮದಲ್ಲಿ ಟಾಕಿಂಗ್ ಸ್ಟಾರ್ : ಸೃಜನ್ ಗೆ ಅಭಿಮಾನಿಗಳಿಂದ ಭರ್ಜರಿ ಗಿಫ್ಟ್

ಬೆಂಗಳೂರು :  ನಟ, ನಿರೂಪಕ ಟಾಕಿಂಗ್ ಸ್ಟಾರ್ ಎಂದೇ ಫೇಮಸ್ ಆಗಿರುವ ಸೃಜನ್ ಲೋಕೆಶ್  ಅವರು ಹುಟ್ಟುಹಬ್ಬವನ್ನು ಇಂದು ದೇವಸ್ಥಾನದಲ್ಲಿ ಆಚರಿಸಿಕೊಂಡರು. ಸೃಜನ್​ ಬರ್ತ್ ಡೇ ಪ್ರಯುಕ್ತ ಅವರ ಕುಟುಂಬಸ್ಥರಿಂದ ಗವಿಪುರಂನ ಬಂಡಿಕಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು.

ಗವಿಪುರಂನ ಬಂಡಿಕಾಳಮ್ಮ ದೇವಸ್ಥಾನದ ಪೂರ್ವ ದಿಕ್ಕಿನ ಮಹಾದ್ವಾರವನ್ನು ಕಟ್ಟಿಸಿರುವ ಸೃಜನ್, ಅವರ ಹುಟ್ಟುಹಬ್ಬರ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ, ಧನ್ವಂತರಿ ಹೋಮ ಮಾಡಿಸಿ ಇಂದು ದೇವಸ್ಥಾನದ ದ್ವಾರದ ಉದ್ಘಾಟನೆ ಮಾಡಿದ್ದರು. ಇನ್ನ ಈ ದ್ವಾರಕಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೇಟಿಂಗ್​ ಮಾಡಿಸಿದ್ದರು ಎಂದು ತಿಳಿದುಬಂದಿದೆ.

Image result for srujan lokesh birthday

Image result for srujan lokesh birthday

ಸೃಜನ್​ ಪತ್ನಿ ಗ್ರೀಷ್ಮಾ, ತಾಯಿ ಗಿರಿಜಾ ಲೋಕೇಶ್ ಸೇರಿದಂತೆ ಕುಟುಂಬಸ್ಥರು ಮತ್ತು ಆಪ್ತರ ಜೊತೆ ಪೂಜೆಯಲ್ಲಿ ತೊಡಗಿದ್ದು, ಆಪ್ತ ಸ್ನೇಹಿತ ದರ್ಶನ್​ ಸಹ ಭಾಗಿಯಾಗಿದ್ದಾರೆ. ಸೃಜನ್​ ಲೋಕೇಶ್​ಗೆ  ಬೆಳ್ಳಿ ಕಿರೀಟ ಗಿಫ್ಟ್ ನೀಡಿದ ಅಭಿಮಾನಿಗಳೊಂದಿಗೆ ಕೇಕ್ ಕತ್ತಿರಿಸಿ, ಜೊತೆಗೆ ಗಿಡ ನಿಟ್ಟು ಬರ್ತ್ ಡೇಯನ್ನು ಆಚರಿಸಿಕೊಂಡರು.

 

Image result for srujan lokesh birthday

Leave a Reply

Your email address will not be published.

Social Media Auto Publish Powered By : XYZScripts.com