ರಾಮನಗರ : ಜೀತಪದ್ಧತಿ ಇನ್ನೂ ಜೀವಂತ..! : ರಕ್ಷಣೆಗೆ ಮುಂದಾದ ಸ್ವಯಂಸೇವಾ ಸಂಸ್ಥೆ

ರಾಮನಗರ : ರಾಮನಗರ ಜಿಲ್ಲೆಯಲ್ಲಿ‌ ಜೀತ ಪದ್ಧತಿ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಕನಕಪುರ ತಾಲೂಕಿನ‌ ಮರಳವಾಡಿ ಗ್ರಾಮದಲ್ಲಿ ಒಂದೇ ಕುಟುಂಬದ 9 ಮಂದಿ ಜೀತದಿಂದ ಮುಕ್ತಿ ನೀಡಲಾಗಿದೆ. ಮೂಲತಃ ತಮಿಳುನಾಡಿನ‌ ಕೃಣ್ಣಗಿರಿ‌ ಜಿಲ್ಲೆಯವರಾದ ಮಾದಪ್ಪ, ಪತ್ನಿ ಕೆಂಚಮ್ಮ ಹಾಗೂ ಇವರ 7 ಮಂದಿ ಮಕ್ಕಳಿಗೆ ಜೀತದಿಂದ ವಿಮುಕ್ತಿ ಸಿಕ್ಕಿದೆ.

ಕೋಚಪ್ಪ ಎಂಬಾತನ ತೋಟದ‌ ಮನೆಯಲ್ಲಿ 4 ವರ್ಷಗಳಿಂದ ಅನಕ್ಷರಸ್ಥ ಕುಟುಂಬ ಜೀತದಾಳುಗಳಾಗಿ ಕೆಲಸ ಮಾಡಿದೆ. ಕೋಚಪ್ಪ ನಾಲ್ಕು ವರ್ಷದಿಂದ ತೋಟದಲ್ಲಿಯೇ ಬಂಧ‌ನದಲ್ಲಿ ಇರಿಸಿಕೊಂಡಿದ್ದ. ಇಂಟರ್ ನ್ಯಾಷನಲ್ ಜಷ್ಟೀಸ್ ಮಿಷನ್ ಸ್ವಯಂ ಸೇವಾ ಸಂಸ್ಥೆಯು ಇವರ ರಕ್ಷಣೆ ಧಾವಿಸಿ ಜೀತದಿಂಧ ಮುಕ್ತಿ ಕೊಡಿಸಿದೆ. ಸದ್ಯ ರಾಮನಗರ ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com