ಕೈ-ಜೆಡಿಎಸ್​ ಪಾಪದ ಭಾರಕ್ಕೆ ಅವರೇ ಕುಸಿಯುತ್ತಾರೆ : ಮೈತ್ರಿ ಸರ್ಕಾದ ವಿರುದ್ಧ ಶೋಭಾ ಕಿಡಿ

ಬೆಂಗಳೂರು :  ಕಾಂಗ್ರೆಸ್​-ಜೆಡಿಎಸ್​ ಪಾಪದ ಭಾರಕ್ಕೆ ಅವರೇ ಕುಸಿದು ಹೋಗುತ್ತಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟೀಕಾ ಪ್ರಹಾರ ಮಾಡಿದ್ದಾರೆ.

ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆ ಮುಕ್ತಾಯ ಬಳಿಕ ಮಾತನಾಡಿದ ಶೋಭಾ ಕರಂದ್ಲಾಜೆ, ಮೈತ್ರಿ ಸರ್ಕಾರದ ವಿರುದ್ದ ಹರಿಹಾಯ್ದರು. ಒಂದು ತಿಂಗಳಾದರೂ ಮೈತ್ರಿ ಸರ್ಕಾರ ಟೇಕಾಫ್ ಆಗಿಲ್ಲ. ಕೆಂಪೇಗೌಡ ಜಯಂತಿಯಲ್ಲಿ ಮೋದಿ ವಿರುದ್ಧ ಅವರು ಏನು ಮಾತನಾಡಿದ್ದಾರೆ ಗೊತ್ತು. ಸ್ವಾಮೀಜಿಗಳು ರಾಜಕೀಯ ಮಾಡಬಾರದು. ಮೋದಿ ಬಗ್ಗೆ ಟೀಕಿಸಿದರು ಎಂದು ನಂಜಾವಧೂತ ಶ್ರೀಗಳಿಗೆ ತಿರುಗೇಟು ನೀಡಿದರು.

ನಾಳೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಇದೆ.  ಇಂದಿನ ಸಭೆಯಲ್ಲಿ ಕಾರ್ಯಸೂಚಿಗಳ ಕುರಿತು ಇಂದು ಚರ್ಚಿಸಿದ್ದೇವೆ. ಈ ವೇಳೆ ಲೋಕಸಭೆ ಚುನಾವಣೆ ತಯಾರಿ ಕುರಿತು ಚರ್ಚೆ ನಡೆಸುತ್ತಿದ್ದು, ಸಭೆಯಲ್ಲಿ ಕೇಂದ್ರ ಸಚಿವರು, ರಾಜ್ಯದ ಪ್ರಮುಖರು ಭಾಗಿಯಾಗಲಿದ್ದಾರೆ.

ಇದೇ ವೇಳೆ ಮೈತ್ರಿ ಸರ್ಕಾರದ ವೈಫಲ್ಯ ವಿರುದ್ಧ ಹೋರಾಟದ ಬಗ್ಗೆ ಕೂಡ ಚರ್ಚೆ ನಡೆಸಲಿದ್ದೇವೆ. ಮುಂದಿನ ಲೋಕಸಭೆ ಚುನಾವಣೆವರೆಗೂ ಯಡಿಯೂರಪ್ಪನವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆದರೆ ಒಳ್ಳೆಯದು ಎಂದು ಅಭಿಪ್ರಾಯ ರೂಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com