ನಿತ್ಯಾನಂದ ರಾಸಲೀಲೆ & ಅತ್ಯಾಚಾರ ಪ್ರಕರಣ : ವಿಚಾರಣೆ ಜುಲೈ 16ಕ್ಕೆ ಮುಂದೂಡಿಕೆ

ರಾಮನಗರ : ನಿತ್ಯಾನಂದನ ರಾಸಲೀಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳ 16 ಕ್ಕೆ ವಿಚಾರಣೆ ಮುಂದೂಡಲಾಗಿದೆ. ಎರಡನೇ ಆರೋಪಿಗೆ ವಾರೆಂಟ್ ಹಿನ್ನೆಲೆಯಲ್ಲಿ ಎರಡನೇ ಆರೋಪಿ ಶಿವವಲ್ಲಭನೇನಿ ಪರ ಶ್ಯೂರಿಟಿದಾರನ ಮನವಿ ಮಾಡಲಾಗಿತ್ತು.

ಅನಾರೋಗ್ಯ ಹಾಗೂ ವಿದೇಶದಲ್ಲಿರುವ ಕಾರಣ ಮುಂದಿನ ವಿಚಾರಣೆಗೆ ಹಾಜರುಪಡಿಸುವುದಾಗಿ ಮನವಿ ಮಾಡಲಾಗಿದೆ. ಮನವಿಯನ್ನು ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ಪುರಸ್ಕರಿಸಿದ್ದಾರೆ. ಮುಂದಿನ ವಿಚಾರಣೆಗೆ ಎಲ್ಲಾ ಅರೋಪಿಗಳು ಕಡ್ಡಾಯವಾಗಿ ಹಾಜರಾಗಬೇಕು. ಹಾಜರ್ ಅಗದಿದ್ದಲ್ಲಿ ಅರೇಸ್ಟ್ ವಾರೆಂಟ್ ನೀಡುವುದಾಗಿ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.