ಚಾಮರಾಜನಗರ : ಮರದಲ್ಲಿ ಮೂಡಿದ ಆಂಜನೇಯನ ಆಕೃತಿ : ಗ್ರಾಮಸ್ಥರಿಂದ ಪೂಜೆ ಸಲ್ಲಿಕೆ

ಮರದಲ್ಲಿ  ಆಂಜನೇಯಸ್ವಾಮಿಯ ಆಕೃತಿ ಉದ್ಭವವಾಗಿರುವ ಅಚ್ಚರಿ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿರುವ ಮರವೊಂದರಲ್ಲಿ ಆಂಜನೇಯ ಸ್ವಾಮಿಯನ್ನು ಹೋಲುವ ಆಕೃತಿ ಮೂಡಿದೆ.

ದೇವಸ್ಥಾನದ ಬಳಿ ಇರುವ ಮರವೊಂದರಲ್ಲಿ ಆಂಜನೇಯಸ್ವಾಮಿಯ ಆಕೃತಿ ಕಂಡು ಬಂದಿದೆ. ಎನ್ನುವ ವಿಷಯವನ್ನು ತಿಳಿದ ಗ್ರಾಮಸ್ಥರು ಹಾಗೂ ಭಕ್ತ ರು ದೇವಸ್ಥಾನಕ್ಕೆ ತಂಡೋಪ ತಂಡವಾಗಿ ಆಗಮಿಸಿ ಮರದಲ್ಲಿ ಮೂಡಿರುವ ಆಕೃತಿಗೆ ಪೂಜೆ ಸಲ್ಲಿಸ್ತಿದ್ದಾರೆ.

ಇದೊಂದು ಅಚ್ಚರಿಯೇ ಸರಿ. ಕಳೆದ ವಾರ‌ ಮರದ ನೆರಳಿನಲ್ಲಿ ಕುಳಿತಿದ್ದಾಗ ಆಂಜನೇಯನ ಮುಖಾಕೃತಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಜ್ಯೋತಿಷಿಗಲ್ಲಿ ವಿಚಾರಿಸಿದಾಗ ಆಂಜನೇಯನೇ ಉದ್ಭವವಾಗಿದ್ದಾನೆ ಪೂಜೆ ಸಲ್ಲಿಸಿ ಎಂದು ತಿಳಿಸಿದ್ದಾರೆ.  ಹೀಗಾಗಿ ಪ್ರತಿದಿನವೂ ಪೂಜೆ ಮಾಡಲಾಗುತ್ತಿದೆ ಎನ್ನುತ್ತಾರೆ ತೆರಕಣಾಂಬಿ ಗ್ರಾಮಸ್ಥರು.

 

Leave a Reply

Your email address will not be published.

Social Media Auto Publish Powered By : XYZScripts.com