ಸಿದ್ದರಾಮಯ್ಯ ನಂತರ ಕುರುಬ ಸಮುದಾಯದ ಅಧಿಕಾರಿಗಳ ರಕ್ಷಣೆಗೆ ಫೀಲ್ಡಿಗಿಳಿದ ಕಾಗಿನೆಲೆ ಶ್ರೀ..!

ದಾವಣಗೆರೆ : ಸಿಎಂ ವಿರುದ್ದ ಕಾಗಿನೆಲೆ ಶ್ರೀ ವಾಗ್ದಾಳಿ ನಡೆಸಿದ್ದಾರೆ. “ರಾಜ್ಯದ ಮೈತ್ರಿ ಸರಕಾರ ಕುರುಬ ಸಮುದಾಯದ ಅಧಿ ಕಾರಿಗಳನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ’ ಎಂದು ಕಾಗಿನೆಲೆ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ನಿರಂಜನಾನಂದಪುರಿ ಶ್ರೀಗಳು ಗಂಭೀರ ಆರೋಪ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಕನಕ ಮಠದಲ್ಲಿ ಹೇಳಿಕೆ ನೀಡಿರುವ ಅವರು ‘ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರಕಾರ ರಚನೆಯಾದ ನಂತರ ಕುರುಬ ಸಮುದಾಯದ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ವರ್ಗಾವಣೆ ಮಾಡಲಾಗುತ್ತದೆ. ಒಂದು ಜಾತಿ, ಜನಾಂಗದ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಕೈಗೊಂಡಿರುವ ದ್ವೇಷದ ಪ್ರಕ್ರಿಯೆ ಖಂಡನೀಯವಾಗಿದೆ. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕುರುಬ ಸಮುದಾಯದ ಅಧಿಕಾರಿಗಳನ್ನು ಮನ ಬಂದಂತೆ ವರ್ಗಾವಣೆ ಮಾಡಲಾಗುತ್ತಿದೆ. ಈ ಕಾರ್ಯವನ್ನು ಕೈ ಬಿಟ್ಟರೆ ಸರಿ. ಸಾಮರಸ್ಯದಿಂದ ಆಡಳಿತ ನಡೆಸಿದರೆ ಸರ್ಕಾರಕ್ಕೆ ಒಳ್ಳೆಯದು. ಇಲ್ಲವಾದರೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಉಗ್ರ ಹೋರಾಟ ನಡೆಸಲಾಗುವುದು ‘ ಎಂದು ಸರ್ಕಾರಕ್ಕೆ ಕಾಗಿನೆಲೆ ಶ್ರೀ ಖಡಕ್ ಎಚ್ಚರಿಕೆ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com