Cricket : ಭಾರತಕ್ಕೆ ಮಣಿದ ಐರ್ಲೆಂಡ್ : ಶತಕದಂಚಿನಲ್ಲಿ ಎಡವಿದ ರೋಹಿತ್, ಯಾದವ್‍ಗೆ 4 ವಿಕೆಟ್

ಬುಧವಾರ ಡಬ್ಲಿನ್ ನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ  ಐರ್ಲೆಂಡ್ ವಿರುದ್ಧ 76 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಇದರೊಂದಿಗೆ 2 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ಐರ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಮೊತ್ತ ಕಲೆಹಾಕಿತು. 97 ರನ್ ಬಾರಿಸಿ ಕೊನೆಯ ಓವರ್ ನಲ್ಲಿ ಔಟಾದ ರೋಹಿತ್ ಶರ್ಮಾ ಶತಕ ವಂಚಿತರಾದರು. ಮಿಂಚಿನ ಆರ್ಧಶತಕ ಬಾರಿಸಿದ ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ 74 ರನ್ ಸಿಡಿಸಿದರು.

Image result for kuldeep yadav 4 wickets ireland

ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ 20 ಓವರ್ ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 132 ರನ್ ಸೇರಿಸಿಲಷ್ಟೇ ಶಕ್ತವಾಗಿ ಶರಣಾಯಿತು. ಐರ್ಲೆಂಡ್ ಪರವಾಗಿ ಏಕಾಂಗಿ ಹೋರಾಟ ನಡೆಸಿದ ಜೇಮ್ಸ್ ಶಾನನ್ 60 ರನ್ ಗಳಿಸಿದರು. ಭಾರತದ ಪರವಾಗಿ ಸ್ಪಿನ್ನರ್ ಕುಲದೀಪ್ ಯಾದವ್ 4, ಯಜುವೇಂದ್ರ ಚಹಲ್ 3 ಹಾಗೂ ವೇಗಿ ಜಸ್ಪ್ರೀತ್ ಬುಮ್ರಾಹ್ 2 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com